Select Your Language

Notifications

webdunia
webdunia
webdunia
webdunia

ಸದ್ಯದಲ್ಲೇ ಆರಂಭವಾಗಲಿದೆ ಕಿರುತೆರೆಯ ಎರಡು ಜನಪ್ರಿಯ ಶೋಗಳು

ಸದ್ಯದಲ್ಲೇ ಆರಂಭವಾಗಲಿದೆ ಕಿರುತೆರೆಯ ಎರಡು ಜನಪ್ರಿಯ ಶೋಗಳು
ಬೆಂಗಳೂರು , ಭಾನುವಾರ, 9 ಆಗಸ್ಟ್ 2020 (11:03 IST)
ಬೆಂಗಳೂರು: ಕಿರುತೆರೆಯ ಎರಡು ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಎರಡು ಜನಪ್ರಿಯ ಶೋಗಳು ಮತ್ತೆ ಹೊಸ ಸಂಚಿಕೆಗಳೊಂದಿಗೆ ಪ್ರಸಾರ ಅರಂಭಿಸಲಿವೆ. ಅಷ್ಟಕ್ಕೂ ಆ ಎರಡು ಶೋಗಳು ಯಾವುವು ಗೊತ್ತಾ?


ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಸೃಜನ್ ಲೋಕೇಶ್ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಮತ್ತೆ ಸದ್ಯದಲ್ಲೇ ಪ್ರಸಾರ ಆರಂಭಿಸಲಿದೆ. ಈ ಮೂಲಕ ಬಹಳ ದಿನಗಳ ನಂತರ ಸೃಜನ್ ಕಿರುತೆರೆಗೆ ಮರಳುತ್ತಿದ್ದಾರೆ. ಈ ಶೋ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಆದರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ಸೃಜನ್ ಈಗ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ.

ಇನ್ನೊಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾಮಿಡಿ ಕಿಲಾಡಿಗಳು. ಈ ಶೋ ಕೂಡಾ ಮತ್ತೆ ಶುರುವಾಗುತ್ತಿದ್ದು, ಸೀಸನ್ 4 ರ ಮೊದಲ ಸಂಚಿಕೆ ಸದ್ಯದಲ್ಲೇ ಪುನರಾರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾದಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ