Publish Date: Mon, 12 Dec 2016 (14:01 IST)
Updated Date: Mon, 12 Dec 2016 (16:16 IST)
ಚೆನ್ನೈ: ತಮಿಳುನಾಡು ಕರಾವಳಿಯಲ್ಲಿ ವಾರ್ಧಾ ಚಂಡಮಾರುತ ಬೀಸುತ್ತಿರುವ ಪರಿಣಾಮ ಟಿವಿ ಚಾನೆಲ್ ಪ್ರಸಾರಕ್ಕೂ ತಗುಲಿದೆ. ಚೆನ್ನೈ ಮೂಲದ ಸನ್ ನೆಟ್ ವರ್ಕ್ ಚಾನೆಲ್ ಗಳು ಪ್ರಸಾರವಾಗುತ್ತಿಲ್ಲ.
ಬಿರುಗಾಳಿ ಸಹಿತ ಮಳೆಯಾದ ಬೆನ್ನಲ್ಲೇ ಸನ್ ನೆಟ್ ವರ್ಕ್ ಒಡೆತನದ ಎಲ್ಲಾ ಚಾನೆಲ್ ಗಳು ಬಂದ್ ಆಗಿವೆ. ಪ್ರಸಾರದಲ್ಲಿ ಅಡಚಣೆಯಾಗಿದ್ದು, ಸದ್ಯದಲ್ಲೇ ಸರಿಯಾಗಲಿದೆ ಎಂಬ ಸಂದೇಶ ಟಿವಿ ಪರದೆ ಮೇಲೆ ಮೂಡಿ ಬರುತ್ತಿದೆ.
ವಾರ್ಧಾ ಚಂಡಮಾರುತ ಅಬ್ಬರಕ್ಕೆ ತಮಿಳುನಾಡಿನಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಸಂಜೆಯ ವೇಳೆಗೆ ಬೆಂಗಳೂರಿನಲ್ಲೂ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ