Select Your Language

Notifications

webdunia
webdunia
webdunia
webdunia

ಈ ವಾರದ ಸೂಪರ್ ಜೋಡಿಯಲ್ಲಿ “ಮಲ್ಲಯುದ್ಧ”

ಈ ವಾರದ ಸೂಪರ್ ಜೋಡಿಯಲ್ಲಿ “ಮಲ್ಲಯುದ್ಧ”
Bangalore , ಬುಧವಾರ, 25 ಜನವರಿ 2017 (12:13 IST)
ಭಾರತೀಯ ರಾಜ ಪರಂಪರೆಯ “ಮಲ್ಲ ಯುದ್ಧ” ಬಹು ರಂಜನೀಯ ಆಟ. ಮೈಸೂರಿನ ದಸರೆಯಲ್ಲಿಯೂ ಬಹಳ ವಿಶೇಷತೆ ಪಡೆದುಕೊಂಡ ದೇಶಿ ಸಂಸ್ಕೃತಿ. ಇಂಥಹ ಟಾಸ್ಕ್‌ಗಳನ್ನು ಈಗ “ಸೂಪರ್ ಜೋಡಿ-2”ರಲ್ಲಿ ಬಳಸಿಕೊಳ್ಳಲಾಗಿದೆ.
 
“ಸೂಪರ್ ಜೋಡಿ-2” ಅಖಾಡದಲ್ಲಿ ಕುಸ್ತಿಯ ವೇಷ ಭೂಷಣದಲ್ಲಿ ಎದುರಾಳಿಗೆ ತೊಡೆತಟ್ಟಿ ನಿಂತು ತಮ್ಮ ಸಾಮರ್ಥ್ಯದ ಬಲ ಪ್ರದರ್ಶನವನ್ನು ತೋರಿಸಲು ರೆಡಿಯಾಗಿದ್ದಾರೆ ಈ ಜೋಡಿಗಳು. ಈ ಮಲ್ಲ ಯುದ್ಧದ ಜಯಶಾಲಿ ಹಾರ ಯಾರ ಕೊರಳಿಗೆ ಎಂಬುದು ಕಾದುನೋಡಬೇಕಾಗಿದೆ.
 
ಹಾಗೆ ಮತ್ತೊಂದು “ಸ್ಪಿನ್ ವೀಲ್” ಟಾಸ್ಕ್‌ನಲ್ಲಿ ಮೆಣಸಿನಕಾಯಿ ತಿಂದ “ಫೈರಿಂಗ್‍ಸ್ಟಾರ್” ತಮ್ಮ ಮಾತಿನ ವರಸೆಯ ಖಾರ ಎರಚಿ, ಭಾರಿ ಸವಾಲಿನಲ್ಲಿ ರಂಜನೆಯನ್ನೂ ನೀಡಿದ್ದಾರೆ. ಈ ಸೂಪರ್ ಜೋಡಿ-2ನಲ್ಲಿ  ಈ ವಾರ ಜೋಡಿ ಸಿನೆಮಾ ತಂಡ ಮತ್ತಷ್ಟು ಮನರಂಜನೆಯನ್ನು ನೀಡಿದೆ. 
 
“ಆಪರೇಷನ್ ಅಲಮೇಲಮ್ಮ” ಜೊಡಿಗಳು ಜೊತೆ ಮತ್ತಷ್ಟು ಮನರಂಜನೆಯನ್ನು ನೀಡಿದ್ದಾರೆ. ಅಲ್ಲದೆ ಯು ಟರ್ನ್ ಶ್ರದ್ಧಾ, ಸಿಂಪಲ್ ಸುನಿ ಮತ್ತು ರಿಷಿ ಕೂಡಾ ಟಸ್ಕ್‌ಗಳಲ್ಲಿ ಭಾಗವಹಿಸಿ ಜೋಡಿಗಳಿಗೆ ಸ್ಪೂರ್ತಿಯಾದರು. ಇನ್ನು ಈ ಹತ್ತು ಜೋಡಿಗಳ ಮಧ್ಯೆ ಈಗ ಎಲಿಮಿನೇಶನ್ ರೌಂಡ್ ಶುರುವಾಗಿದೆ. 
 
ಈಗಾಗಲೇ ವೀಕ್ಷಕರ ಮನೆ ಮಾತಾಗಿರುವ ಈ ಜೋಡಿಗಳಲ್ಲಿ ಯಾರು ಹೊರ ಹೊಗುತ್ತಾರೆ ಎಂಬುದು ಎಲ್ಲರಲ್ಲಿ ಕೂತುಹಲವಾದ ಸಂಗತಿ. ಹೀಗೆ ಸಾಕಷ್ಟು ಮನರಂಜನೆ ಈ ವಾರದಲ್ಲಿ ನೀಡಲು ಸಜ್ಜಾಗಿರುವ ಸೂಪರ್ ಜೋಡಿ -2 ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8ಕ್ಕೆ “ಸ್ಟಾರ್ ಸುವರ್ಣ”ದಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಐದು ವ್ಯಕ್ತಿಗಳ ಚಿತ್ರಣದ ಹ್ಯಾಪಿ ನ್ಯೂ ಇಯರ್