Select Your Language

Notifications

webdunia
webdunia
webdunia
webdunia

ಐದು ವ್ಯಕ್ತಿಗಳ ಚಿತ್ರಣದ ಹ್ಯಾಪಿ ನ್ಯೂ ಇಯರ್

ಹ್ಯಾಪಿ ನ್ಯೂ ಇಯರ್
Bangalore , ಬುಧವಾರ, 25 ಜನವರಿ 2017 (12:11 IST)
ಪನ್ನಗ ಭರಣ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಚಿತ್ರ ’ಹ್ಯಾಪಿ ನ್ಯೂ ಇಯರ್’.  ಅವರ ಪ್ರಕಾರ ಜೀವನ ಎಂಬುದು ಒಂದು ನಿರಂತರ ಪಯಣ. ಬದುಕಿನ ಪ್ರತಿ ಕ್ಷಣವೂ ನಮ್ಮ ಜೀವನದ ಗತಿಯನ್ನು ನಿರ್ಧರಿಸುತ್ತದೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಮುಖವಾಡ ಧರಿಸಿ ಬದುಕುವುದೇ ಹೆಚ್ಚು. ಈ ಚಿತ್ರ ಅಂತಹ ಐದು ವ್ಯಕ್ತಿಗಳ ಚಿತ್ರಣ ಎನ್ನುತ್ತಾರೆ.
 
ಈಗಾಗಲೆ ಡಬ್ಬಿಂಗ್ ಮುಗಿಸಿಕೊಂಡು ರೀರೆಕಾರ್ಡಿಂಗ್ ಹಂತ ತಲುಪಿರುವ ಈ ಚಿತ್ರದ ಮೂಲಕ ಸೃಷ್ಟಿ ಪಾಟೀಲ್ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಇದೊಂದು ಹಾಸ್ಯ ಸನ್ನಿವೇಷಗಳ ಮೂಲಕವೇ ಸಂಪೂರ್ಣ ಮನರಂಜನೆ ನೀಡುವ ಚಿತ್ರ ಜೊತೆಗೆ ಬಹು ತಾರಗಣದ ಚಿತ್ರ ಸಹ. 
 
ಸೌಮ್ಯ ಫಿಲ್ಮ್ಸ್ ಲಾಂಛನದಲ್ಲಿ ಮೂಡಿ ಬರುತ್ತಿರುವ ಚಿತ್ರವನ್ನು ವನಜ ಪಾಟೀಲ್ ನಿರ್ಮಿಸಿದ್ದಾರೆ.  ವಿಜಯ ರಾಘವೇಂದ್ರ, ದಿಗಂತ್, ಧನಂಜಯ್, ಬಿ ಸಿ ಪಾಟೀಲ್, ಸಾಯಿಕುಮಾರ್, 
ಶ್ರುತಿ ಹರಿಹರನ್, ಸೋನು ಗೌಡ, ಸುಧಾರಾಣಿ, ಸೃಷ್ಟಿ ಪಾಟೀಲ್, ಮಾಳವಿಕ ಅವಿನಾಶ್, ರಾಕ್‍ಲೈನ್ ವೆಂಕಟೇಶ್, ಕಡ್ಡಿಪುಡಿ ಚಂದ್ರು, ತಬಲಾ ನಾಣಿ, ರಾಜು ತಾಳಿಕೋಟೆ, ರಾಜಶ್ರೀ ಪೊನ್ನಪ್ಪ, ಮಾರ್ಗರೀಟ ಮುಂತಾದವರ ತಾರಾಗಣವಿದೆ.
 
ಶ್ರೀಶ ಕೂದುವಳ್ಳಿ ಛಾಯಾಗ್ರಹಣ, ರಘು ದೀಕ್ಷಿತ್ ಅವರ ಸಂಗೀತ, ಪನ್ನಗ ಭರಣ ಅವರಿಗೆ ಚಿತ್ರ ಕಥೆಯಲ್ಲಿ ಆದಿ ಶಂಕರ್, ಅವಿನಾಶ್ ಬಲೆಕ್ಕಳ ಸಹಾಯ ಮಾಡಿದ್ದಾರೆ. ಸಂಭಾಷಣೆಯನ್ನು ಸಿಂಪಲ್ ಸುನಿ, ಪ್ರತಿಭಾ ನಂದಕುಮಾರ್, ಸತ್ಯಪ್ರಕಾಶ್, ಆದಿ ಶಂಕರ್ ಹಾಗೂ ಅವಿನಾಷ್ ಬಲೆಕ್ಕಳ ಬರೆದಿದ್ದಾರೆ.
 
ಸಚಿನ್ ಹೆಗ್ಗಾರ್ ವಸ್ತ್ರ ವಿನ್ಯಾಸ, ಮದನ್ ಹರಿಣಿ ಅವರ ನೃತ್ಯ ಸಂಯೋಜನೆ, ಥ್ರಿಲ್ಲರ್ ಮಂಜು ಸಾಹಸ, ದಿನೇಷ್ ಅವರ ಮೇಕ್ ಅಪ್, ಇಸ್ಮಾಯಿಲ್ ಅವರ ಕಲೆ, ನರಸಿಂಹ ಜಾಲಹಳ್ಳಿ ಅವರ ನಿರ್ಮಾಣ ನಿರ್ವಹಣೆಲೀ ಚಿತ್ರಕ್ಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಪ್ ಸ್ಟಾರ್ ಮೈಕೇಲ್ ಜಾಕ್ಸನ್‌ದು ಸಹಜ ಸಾವಲ್ಲವಂತೆ