ಈ ವೀಕೆಂಡ್ ಯಾವ ಚಾನೆಲ್ ತಿರುಗಿಸಿದ್ರೂ ಹಬ್ಬನೇ!

Webdunia
ಶುಕ್ರವಾರ, 29 ಮಾರ್ಚ್ 2019 (08:52 IST)
ಬೆಂಗಳೂರು: ನಾಳೆ ಮತ್ತು ನಾಡಿದ್ದು ಕನ್ನಡ ಕಿರುತೆರೆ ವೀಕ್ಷಕರಿಗೆ ಫುಲ್ ಹಬ್ಬ. ಕಾರಣ ಕನ್ನಡದ ನಂ.1 ಮತ್ತು ನಂ.2 ನೇ ಸ್ಥಾನದಲ್ಲಿರುವ ಎರಡು ವಾಹಿನಿಗಳಲ್ಲಿ ಪ್ರೇಕ್ಷಕರಿಗೆ ಭರ್ಜರಿ ರಸದೌತಣ ನೀಡುವ ಕಾರ್ಯಕ್ರಮ ಮೂಡಿಬರಲಿದೆ.


ಜೀ ಕನ್ನಡದಲ್ಲಿ ನಾಳೆ ಮತ್ತು ನಾಡಿದ್ದು ಸಂಜೆ 7 ಗಂಟೆಯಿಂದ ಹೆಮ್ಮೆಯ ಕನ್ನಡಿಗ ಪ್ರಶಸ್ತಿ ಸಮಾರಂಭದ ಪ್ರಸಾರ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ವಿವಿಧ ಕ್ಷೇತ್ರದ ಗಣ್ಯರಿಗೆ ಪ್ರಶಸ್ತಿ ನೀಡಲಾಗಿದೆ ಮತ್ತು ಪ್ರೇಕ್ಷಕರಿಗೆ ಮುದ ನೀಡುವಂತಹ ತಾರೆಯರ ಮನರಂಜನಾ ಕಾರ್ಯಕ್ರಮಗಳೂ ಇವೆ.

ಇನ್ನು, ಕಲರ್ಸ್ ಕನ್ನಡ ಸ್ಯಾಂಡಲ್ ವುಡ್ ಕಂಡ ಅತ್ಯಂತ ಯಶಸ್ವೀ ಚಿತ್ರ ‘ಕೆಜಿಎಫ್’ ಪ್ರಸಾರ ಮಾಡಲು ಇದೇ ಶನಿವಾರ 7 ಗಂಟೆಗೆ ಮುಹೂರ್ತ ನಿಗದಿ ಮಾಡಿದೆ. ಇದೇ ಮೊದಲ ಬಾರಿಗೆ ಕೆಜಿಎಫ್ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದ್ದು, ರಾಕಿ ಬಾಯ್ ನ ನೋಡಲು ವೀಕ್ಷಕರು ಉತ್ಸುಕರಾಗಿದ್ದಾರೆ. ಹಾಗಾಗಿ ಈ ವೀಕೆಂಡ್ ವೀಕ್ಷಕರಿಗೆ ಹಬ್ಬವಾಗುವುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Tamil Big Boss: ಟ್ರೋಫಿ ಗೆದ್ದ ವೈಲ್ಡ್‌ಕಾರ್ಡ್‌ ಸ್ಪರ್ಧಿ, ಅಭಿಮಾನಿಗಳಿಗೆ ಶಾಕ್‌

ಮಂಡ್ಯದ ಹೈದ ಗಿಲ್ಲಿ ನಟ ಬಿಗ್ ಬಾಸ್ ಗೆದ್ದಿದ್ದಕ್ಕೆ ಎಚ್ ಡಿ ಕುಮಾರಸ್ವಾಮಿ ಏನಂದ್ರು ನೋಡಿ

BBK12 ರನ್ನರ್ ಅಪ್ ಆದ ಬಳಿಕ ರಕ್ಷಿತಾ ಶೆಟ್ಟಿ ಶಾಕಿಂಗ್ ಹೇಳಿಕೆ

ಬಿಗ್‌ಬಾಸ್‌ ಟ್ರೋಫಿ ಗೆದ್ದ ಗಿಲ್ಲಿ ನಟನಿಗೆ ಭರ್ಜರಿ ಬಹುಮಾನ: ಅಚ್ಚರಿಯ ಗಿಫ್ಟ್‌ ನೀಡಿದ ಕಿಚ್ಚ ಸುದೀಪ್‌

BigBoss Season 12Finale: 6ನೇ ಸ್ಪರ್ಧಿಯಾಗಿ ದೊಡ್ಮನೆಯಿಂದ ಹೊರಬಂದ ಸ್ಟ್ರಾಂಗ್ ಅಭ್ಯರ್ಥಿ

ಮುಂದಿನ ಸುದ್ದಿ
Show comments