Select Your Language

Notifications

webdunia
webdunia
webdunia
webdunia

ತಾರಕಾಸುರನ ಅಂತ್ಯಕ್ಕೆ ಕಾರ್ತಿಕೇಯನ ಜನನ

ತಾರಕಾಸುರನ ಅಂತ್ಯಕ್ಕೆ ಕಾರ್ತಿಕೇಯನ ಜನನ
Bangalore , ಗುರುವಾರ, 15 ಡಿಸೆಂಬರ್ 2016 (07:50 IST)
ಸ್ಟಾರ್ ಸುವರ್ಣ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿಯಾದ ಹರ ಹರ ಮಹಾದೇವ ತನ್ನ 100 ಕಂತುಗಳನ್ನು ಪೂರೈಸಿದ್ದು ಜನಮಾನಸದಲ್ಲಿ ಗಟ್ಟಿಯಾಗಿ ಬೇರೂರಿದೆ. ಸತಿ ಶಿವರ ಪ್ರೇಮ ಕಥೆಯಿಂದ ಪ್ರಾರಂಭವಾದ ಈ ಧಾರಾವಾಹಿ, ನಂತರ ಸತಿ ಸ್ವಯಂವರ, ಸತಿ ಮಹಾದೇವರ ವಿವಾಹ, ಸತಿ ದಹನ, ವೀರಭದ್ರನ ಅವತಾರ, ದಕ್ಷನ ಸಂಹಾರ 
, ಪಾರ್ವತಿಯ ಉಗಮ , ಪಾರ್ವತಿ ಮಹಾದೇವರ ಪ್ರೇಮ ಕಥೆ ಹೀಗೆ ಮುಂದೊರೆದು ಇದೀಗ ಪಾರ್ವತಿ ಮಹಾದೇವರ ವಿವಾಹದ ನಂತರ ಧಾರಾವಾಹಿಯು ಸುಬ್ರಮಣ್ಯನ ಜನನದ ಮತ್ತೊಂದು ಪ್ರಮುಖ ಘಟ್ಟ ತಲುಪಿದೆ.
 
ಶಿವನ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ಬಿತ್ತರಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯು ನೋಡುಗರಿಗೆ ಉತ್ತಮ ತಾಂತ್ರಿಕತೆ , ಗ್ರಾಫಿಕ್ಸ್ ಅಳವಡಿಕೆ ಹೀಗೆ ಹಲವಾರು ವಿಷಯಗಳ ಮೂಲಕ ನೋಡುಗರ ಗಮನ ಸೆಳೆದಿದೆ.
 
ಇದೇ ಶನಿವಾರ ಒಂದು ಘಂಟೆಯ ವಿಶೇಷ ಸಂಚಿಕಯನ್ನು ಸ್ಟಾರ್ ಸುವರ್ಣ ವಾಹಿನಿಯು ಬಿತ್ತರಿಸುತ್ತಿದ್ದು ಇದು, ಕಾರ್ತಿಕೇಯನ ಕುರಿತಾದ ವಿಶೇಷ ದೃಶ್ಯಾವಳಿಗಳುಳ್ಳ ಸಂಚಿಕೆಯಾಗಲಿದೆ.  ಈ ವಿಶೇಷ ಸಂಚಿಕೆಯು ಇದೇ ಡಿಸೆಂಬರ್ 17 ರಂದು ರಾತ್ರಿ 7.30ರಿಂದ 8.30 ರವರೆಗೆ ಪ್ರಸಾರವಾಗಲಿದ್ದು ನೋಡುಗರನ್ನು ಭಕ್ತಿಯ ಕಡಲಲ್ಲಿ ತೇಲುವಂತೆ ಮಾಡುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

"ಚರ್ಚೆ- ಚಾ ಆರ್ ಛೇ": ನೋಟು ನಿಷೇಧದ ಮೇಲೊಂದು ಕನ್ನಡ ಕಿರುಚಿತ್ರ( ವಿಡಿಯೋ)