Publish Date: Mon, 02 Mar 2020 (09:08 IST)
Updated Date: Mon, 02 Mar 2020 (09:10 IST)
ಬೆಂಗಳೂರು: ನಟ ಸೃಜನ್ ಲೋಕೇಶ್ ಕಲರ್ಸ್ ವಾಹಿನಿಯಲ್ಲಿ ನಡೆಸಿಕೊಡುತ್ತಿದ್ದ ಮಜಾ ಟಾಕೀಸ್ ಮುಕ್ತಾಯಗೊಳಿಸಿದ ಮೇಲೆ ಇನ್ನು ಸಿನಿಮಾದಲ್ಲೇ ಬ್ಯುಸಿಯಾಗುತ್ತಾರೇನೋ ಎಂದು ಎಲ್ಲರೂ ಅಂದುಕೊಂಡಿದ್ದರು.
ಅದರ ನಡುವೆಯೇ ಸೃಜನ್ ಜೀ ಕನ್ನಡದಲ್ಲಿ ಮತ್ತೆ ಎಂಟ್ರಿ ಕೊಡುವ ಸುದ್ದಿ ಕೊಟ್ಟಿದ್ದರು. ಆದರೆ ಯಾವ ಶೋ ಎಂದು ಹೇಳಿರಲಿಲ್ಲ. ಆದರೆ ಇದೀಗ ಅದು ಬಹಿರಂಗವಾಗಿದೆ.
ಇದಕ್ಕೂ ಮೊದಲು ಸೃಜನ್ ಜೀ ವಾಹಿನಿಯಲ್ಲಿ ಚೋಟಾ ಚಾಂಪಿಯನ್ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು. ಇದೀಗ ಮತ್ತೆ ಅದೇ ಕಾರ್ಯಕ್ರಮದ ಮೂಲಕ ಜೀ ಕನ್ನಡಕ್ಕೆ ರಿ ಎಂಟ್ರಿ ಪಡೆಯಲಿದ್ದಾರೆ. ಸದ್ಯದಲ್ಲೇ ಕಾರ್ಯಕ್ರಮದ ಅಡಿಷನ್ ನಡೆಯಲಿದೆ ಎಂದು ವಾಹಿನಿ ಪ್ರಕಟಿಸಿದೆ.