Publish Date: Sat, 28 Jan 2017 (14:45 IST)
Updated Date: Sat, 28 Jan 2017 (14:49 IST)
ಈ ಬಾರಿಯ ಬಿಗ್ ಬಾಸ್ ಪಟ್ಟ ಯಾರಿಗೆ ಒಲಿಯಲಿದೆ ಎಂಬ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಮುಖ್ಯವಾಗಿ ಒಳ್ಳೆ ಹುಡುಗ ಪ್ರಥಮ್ ಹೆಸರು ಕೇಳಿಬರುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಹ ಪ್ರಥಮ್ ಅವರೇ ಈ ಬಾರಿ ಗೆಲ್ಲಲಿ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ಪ್ರಥಮ್ ಗೆಲುವಿಗೆ ಇನ್ನಷ್ಟು ಬಲ ಬಂದಂತಾಗಿದೆ. ಇಂದು (ಜ.28) ಸಂಜೆ ಬಿಗ್ ಬಾಸ್‍ನ ಅಂತಿಮ ಗೆಲುವು ಯಾರಿಗೆ ಸಿಗಲಿದೆ ಎಂಬುದು ಗೊತ್ತಾಲಿದೆ. ಬಿಗ್ ಬಾಸ್ ಮನೆಯಲ್ಲಿ ಪ್ರಥಮ್ ಚೆನ್ನಾಗಿ ಆಟ ಆಡಿದ್ದಾರೆ. ಹಾಗಾಗಿ ಅವರನ್ನೇ ಗೆಲ್ಲಿಸುವುದು ಒಳಿತು ಎಂದಿದ್ದಾರೆ ಶಿವಣ್ಣ.
ಸದ್ಯಕ್ಕೆ ಮನೆಯಲ್ಲಿ ಕಿರಿಕ್ ಕೀರ್ತಿ, ಮಾಳವಿಕಾ ಅವಿನಾಶ್, ಮೋಹನ್, ರೇಖಾ ಮತ್ತು ಪ್ರಥಮ್ ಇದ್ದಾರೆ. ಇವರ ಜತೆಗೆ ಮುಖ್ಯ ಅತಿಥಿಗಳಾಗಿ ಸಂಜನಾ, ಮಸ್ತಾನ್, ದೊಡ್ಡ ಗಣೇಶ್ ಆಗಮಿಸಿದ್ದಾರೆ. ಬಿಗ್ ಬಾಸ್ 4 ಪಟ್ಟ ಯಾರಿಗೆ ಒಲಿಯಲಿದೆ ಎಂಬುದು ಇಂದು ಸಂಜೆ ನಿರ್ಧಾರವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.