Daily Horoscope
✕

ಬಿಗ್ ಬಾಸ್ ನಲ್ಲಿ ಲಕ್ಷ ಲಕ್ಷ ಗೆದ್ದರೂ ಹಳೆಯ ವೃತ್ತಿಗೇ ಬಂದ ಶೈನ್ ಶೆಟ್ಟಿ

Webdunia
ಮಂಗಳವಾರ, 4 ಫೆಬ್ರವರಿ 2020 (09:38 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಏಳನೇ ಆವೃತ್ತಿಯಲ್ಲಿ ವಿಜೇತರಾಗಿ 60 ಲಕ್ಷ ರೂ. ಬಹುಮಾನ ಮೊತ್ತ ಗೆದ್ದರೂ ಶೈನ್ ಶೆಟ್ಟಿ ತಮ್ಮ ಮೂಲ ವೃತ್ತಿಯನ್ನು ಮರೆತಿಲ್ಲ.


ಬಿಗ್ ಬಾಸ್ ಗೆ ಬರುವ ಮೊದಲು ನಟ ಶೈನ್ ಜೀವನೋಪಾಯಕ್ಕಾಗಿ ಗಲ್ಲಿ ಕಿಚನ್ ಎಂಬ ಹೋಟೆಲ್ ಆರಂಭಿಸಿದ್ದರು. ಶೈನ್ ಬಿಗ್ ಬಾಸ್ ಗೆ ಹೋದ ಮೇಲೆ ಅವರ ಹೋಟೆಲ್ ಮತ್ತಷ್ಟು ಜನಪ್ರಿಯವಾಗಿತ್ತು.

ಇದೀಗ ಬಿಗ್ ಬಾಸ್ ವಿಜೇತರಾದ ಮರುದಿನವೇ ತಮ್ಮ ಗಲ್ಲಿ ಕಿಚನ್ ಗೆ ಬಂದ ಶೈನ್ ಅಭಿಮಾನಿಗಳೊಂದಿಗೆ ಬೆರೆತಿದ್ದಾರೆ. ಈ ಮೊದಲಿನಂತೇ ಹೋಟೆಲ್ ನಲ್ಲಿ ತಿಂಡಿ ಪೂರೈಸುವ ಕೆಲಸ ಮಾಡಿದರೂ ಈ ಬಾರಿ ಅಭಿಮಾನಿಗಳು ಅವರನ್ನು ಸೆಲ್ಫೀಗಾಗಿ ಮುಗಿಬಿದ್ದಿದ್ದಾರೆ. ತಮ್ಮನ್ನು ನೋಡಲು ಬಂದ ಅಭಿಮಾನಿಗಳನ್ನು ಕಂಡು ಮೂಕವಿಸ್ಮಿತರಾದ ಶೈನ್ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.

ಮಸಾಲೆ ದೋಸೆ ಸವಿದ ವಾಸುಕಿ: ಇನ್ನು, ಸ್ಪರ್ಧೆಯಲ್ಲಿ ಮತ್ತೊಬ್ಬ ಫೈನಲಿಸ್ಟ್ ಆಗಿದ್ದ ವಾಸುಕಿ ವೈಭವ್ ಮನೆಯಲ್ಲಿ ಗೆಳೆಯರ ಜತೆ ಪಾರ್ಟಿ ಮಾಡಿದ್ದಾರೆ. ಅಲ್ಲದೆ, ತಾವು ಬಹು ದಿನಗಳಿಂದ ಮಿಸ್ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿ ಭವನ ಮಸಾಲೆ ದೋಸೆ ಸವಿದು ಮನೆಗೆ ಬಂದ ಖುಷಿ ಆಚರಿಸಿಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ನೀವು ಮದುವೆಯಾಗಿಲ್ಲಾಂದ್ರೆ ನಿಮ್ಮನ್ನೇ ಮದುವೆಯಾಗ್ತಿದ್ದೆ ಎಂದು ಸಂಗೀತಾ ಗಂಡನಿಗೆ ಹೇಳಿದ್ದರಂತೆ ಕಾವ್ಯಾ

ಚಿಲ್ಲರೆ ಬದಲಿಗೆ ಚಾಕಲೇಟ್ ನೀಡಿದಾಗ ನಾನಾ ಪಾಟೇಕರ್ ಏನು ಮಾಡಿದ್ರು: ಈ ಐಕಾನಿಕ್ ದೃಶ್ಯ ಈಗಲೂ ವೈರಲ್ Video

ನಟ ನಾನಾ ಪಾಟೇಕರ್ ಇನ್ನಿಲ್ಲ: ಹೃದಯಾಘಾತಕ್ಕೆ ಬಲಿಯಾಯ್ತು ಚಿತ್ರರಂಗದ ಮತ್ತೊಂದು ಪ್ರತಿಭೆ

ಚಿತ್ರದುರ್ಗದಲ್ಲಿ ಶಿವಣ್ಣನ ಎದುರೇ ಬ್ಲಾಸ್ಟ್ ಆದ ಪಟಾಕಿ: ಬೇಲ್ ಪ್ರಚಾರದ ವೇಳೆ ಕೂದಲೆಳೆ ಅಂತರದಲ್ಲಿ ಪಾರಾದ ನಟ

BBK13: ಕಿಚ್ಚನ ಬುದ್ಧಿ ಮಾತಿಗೂ ಬೆಲೆ ಇಲ್ಲ.. ವೀಕೆಂಡ್ ನಲ್ಲಿ ತಪ್ಪಾಯ್ತು ಎನ್ನೋದು, ಗೇಮ್ ನಲ್ಲಿ ಮತ್ತದೇ ತಪ್ಪು ಮಾಡೋದು

ಮುಂದಿನ ಸುದ್ದಿ
Show comments