Publish Date: Mon, 22 Aug 2022 (08:30 IST)
Updated Date: Mon, 22 Aug 2022 (09:00 IST)
ಬೆಂಗಳೂರು: ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರವಾಹಿ ತಂಡದಲ್ಲಿ ನಡೆದ ಬಿರುಕಿನಿಂದಾಗಿ ಆರ್ಯವರ್ಧನ್ ಪಾತ್ರ ಮಾಡುತ್ತಿದ್ದ ನಟ ಅನಿರುದ್ಧ್ ಹೊರ ನಡೆದಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಜೊತೆ ಜೊತೆಯಲಿ ಧಾರವಾಹಿಯಲ್ಲಿ ನಾಯಕನ ಪಾತ್ರ ಯಾರು ಮಾಡಬಹುದು ಎಂಬ ಬಗ್ಗೆ ಪ್ರೇಕ್ಷಕರಲ್ಲಿ ಕುತೂಹಲವಿದೆ. ಈಗಾಗಲೇ ಅನಿರುದ್ಧ್ ಈ ಪಾತ್ರದ ಮೂಲಕ ಜನರ ಮನಸ್ಸಲ್ಲಿ ಆವರಿಸಿಕೊಂಡು ಬಿಟ್ಟಿದ್ದಾರೆ. ಹೀಗಾಗಿ ಈ ಪಾತ್ರ ಮಾಡಲು ಬರುವ ಹೊಸ ನಟರೂ ಅಷ್ಟೇ ಪ್ರಬುದ್ಧ ಮತ್ತು ಪ್ರಖ್ಯಾತರಾಗಿರಬೇಕು.
ಹೀಗಾಗಿ ಈ ಪಾತ್ರವನ್ನು ಈ ಹಿಂದೆ ಆರೂರ್ ಜಗದೀಶ್ ನಿರ್ದೇಶನದಲ್ಲಿ ಮೂಡಿಬಂದಿದ್ದ ಅಶ್ವಿನಿ ನಕ್ಷತ್ರ ಧಾರವಾಹಿಯ ನಾಯಕರಾಗಿದ್ದ ನಟ ಜಯರಾಮ್ ಕಾರ್ತಿಕ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಇದರ ನಡುವೆ ಜೀ ಕನ್ನಡ ವಾಹಿನಿಗೆ ರಿಯಾಲಿಟಿ ಶೋ ತೀರ್ಪುಗಾರರಾಗಿ ಚಿರಪರಿಚಿತರಾಗಿರುವ ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಹೆಸರೂ ಕೇಳಿಬರುತ್ತಿದೆ. ಇವರಿಬ್ಬರಲ್ಲಿ ಒಬ್ಬರು ಫೈನಲ್ ಆದರೂ ಅಚ್ಚರಿಯಿಲ್ಲ.