Select Your Language

Notifications

webdunia
webdunia
webdunia
webdunia

ಅಮೃತವರ್ಷಿಣಿ ಮತ್ತು ಅವನು ಮತ್ತೆ ಶ್ರಾವಣಿ “ಮಹಾ ಸಂಚಿಕೆ”

ಅಮೃತವರ್ಷಿಣಿ ಧಾರಾವಾಹಿ ಅವನು ಮತ್ತೆ ಶ್ರಾವಣಿ ಮಹಾ ಸಂಚಿಕೆ ಸ್ಟಾರ್ ಸುವರ್ಣ Amrithavarshini Serial Mega Episodes Star Suvarna Avanu Matte Shravani
Bangalore , ಮಂಗಳವಾರ, 17 ಜನವರಿ 2017 (11:50 IST)
ಸ್ಟಾರ್ ಸುವರ್ಣವಾಹಿನಿಯ ಹೆಮ್ಮೆಯ ಧಾರಾವಾಹಿಗಳೆಂದೇ ಪ್ರಸಿದ್ಧಿಯಾದ ‘ಅಮೃತವರ್ಷಿಣಿ’ಮತ್ತು ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿಗಳು ಕರುನಾಡ ವೀಕ್ಷಕರ ಪ್ರೀತಿಗೆ ಪಾತ್ರವಾಗಿವೆ. ಸಾವಿರಾರು ಕಂತುಗಳನ್ನು ಪೂರ್ಣಗೊಳಿಸಿ ಜನಮನ ಗೆದ್ದ ಯಶಸ್ವಿಯ ಧಾರಾವಾಹಿಗಳು. ಈ ಹಿನ್ನಲೆಯಲ್ಲಿ ಸ್ಟಾರ್ ಸುವರ್ಣ ಇವೆರಡನ್ನು ಕೂಡಿಸಿಕೊಂಡು “ಮಹಾಸಂಚಿಕೆ”ಯನ್ನು ಮಾಡಲು ನಿರ್ಧರಿಸಿದೆ. 
 
ಜನವರಿ 16ರಿಂದ ಈ ಸಂಚಿಕೆಗಳು ಪ್ರಾರಂಭವಾಗುತ್ತವೆ. ಈಗಾಗಲೇ ಈ ಎರಡು ಧಾರವಾಹಿಗಳ ನಾಯಕಿಯರು ಅತ್ಯಂತ ಕಷ್ಟ ಹಾಗು ಗೊಂದಲದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಈ ಎರಡು ಕುಟುಂಬದವರು ಪುಣ್ಯಕ್ಷೇತ್ರಕ್ಕೆ ಒಟ್ಟಿಗೆ ಹೋಗುವುದು ಅಲ್ಲಿ ಇವರುಗಳ ನಡುವೆ ಇರುವ ಆಂತರಿಕ ಸಮಸ್ಯೆಗಳನ್ನು ಹಂಚಿಕೊಂಡು ಪರಿಹಾರಕ್ಕಾಗಿ ಸಾಕಷ್ಟು ಪ್ರಯತ್ನವನ್ನು 
ಪಡುತ್ತಾರೆ. 
 
ಈ ಪಯಣದಲ್ಲಿ ಎರಡು ಧಾರಾವಾಹಿಗಳ ಕುಟುಂಬದ ಸದಸ್ಯರುಗಳೂ ಕೂಡಾ ಭಾಗವಹಿಸುತ್ತಾರೆ. ಈ ಪಯಣದಲ್ಲಿ ಸಾಕಷ್ಟು ಕುತೂಹಲಕಾರಿ ಘಟನೆಗಳು,ಒಂದಿಷ್ಟು ಮುಚ್ಚಿಟ್ಟ 
ಸಂಗತಿಗಳನ್ನು ಇಲ್ಲಿ ಚಿತ್ರಿಸಲಾಗುವುದು. 
 
ಇಂಥಹ “ಮಹಾಸಂಚಿಕೆ”ಗೆ ಪ್ರಣಯರಾಜಾ “ಶ್ರೀನಾಥ್”ಮತ್ತು “ಪದ್ಮಾವಾಸಂತಿ”ಸಾತ್ ನೀಡುತ್ತಿದ್ದಾರೆ. ಈ ಸೆಲಬ್ರಿಟಿಗಳ ಆಗಮನದಿಂದ ಇವೆರಡು ಧಾರಾವಾಹಿಗಳ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ವಿಜಯ್ ಅವರಿಂದ ಎರಡು ಆಟೋ ಕಾಣಿಕೆ