Publish Date: Tue, 17 Jan 2017 (11:47 IST)
Updated Date: Tue, 17 Jan 2017 (11:50 IST)
ನಟ ದುನಿಯಾ ವಿಜಯ್ ಅವರು ಎರಡು ಆಟೋ ರಿಕ್ಷಾಗಳನ್ನು ಅಂಗವಿಕಲ ಮತ್ತು ಅನಾಥರೊಬ್ಬರಿಗೆ ಉಚಿತವಾಗಿ ಕೊಟ್ಟಿದ್ದಾರೆ. ತಮ್ಮ ಮುಂದಿನ ಚಿತ್ರ ’ಕನಕ’ ಚಿತ್ರದಲ್ಲಿ ಅವರು ಆಟೋ ಚಾಲಕರಾಗಿ ಅಭಿನಯಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಆಟೋಗಳನ್ನು ಉಚಿತವಾಗಿ ಕೊಟ್ಟಿದ್ದಾರೆ.
ಇದೇ ತಿಂಗಳು 20ಕ್ಕೆ ವಿಜಯ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಅಂದು ಆಟೋಗಳನ್ನು ವಿತರಿಸಲಿದ್ದಾರೆ. ಇದಕ್ಕಾಗಿ ಇಬ್ಬರು ಸೂಕ್ತ ಅಭ್ಯರ್ಥಿಗಳನ್ನೂ ಅವರು ಆಯ್ಕೆ ಮಾಡಿದ್ದಾರೆ. ಹುಟ್ಟುಹಬ್ಬದ ದಿನ ಕೈಗೆ ಆಟೋ ಕೀಲಿಕೈ ಹಸ್ತಾಂತರ ಮಾಡಲಿದ್ದಾರೆ.
ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ ಕನಕ. ಈ ಚಿತ್ರಕ್ಕೆ "ಡಾ.ರಾಜ್‌ಕುಮಾರ್ ಅಭಿಮಾನಿ' ಎಂಬ ಟ್ಯಾಗ್‌ಲೈನ್ ಕೂಡಾ ಇದೆ. ಸದ್ಯ ಕಥೆಯಲ್ಲಿ ಬಿಝಿಯಾಗಿರುವ ಚಂದ್ರು, "ಇದೊಂದು ಪಕ್ಕಾ ಎಂಟರ್‌ಟೈನರ್ ಸಿನಿಮಾವಾಗಿರಲಿದೆ' ಎಂದಷ್ಟೇ ಹೇಳುತ್ತಾರೆ. ಚಿತ್ರದಲ್ಲಿ ಆಟೋ ಕೂಡಾ ಪ್ರಮುಖವಾಗಿದ್ದು, ಪ್ರೇಕ್ಷಕರಿಗೆ ಖುಷಿಕೊಡುವ ಸಾಕಷ್ಟು ಅಂಶಗಳು ಕಥೆಯಲ್ಲಿವೆ ಎನ್ನುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.