Publish Date: Mon, 31 Oct 2016 (09:21 IST)
Updated Date: Mon, 31 Oct 2016 (09:27 IST)
ಬೆಂಗಳೂರು: ಬಿಗ್ ಬಾಸ್ ಮನೆಗೆ ಹೊಸ ಅತಿಥಿ ಬಂದಿದ್ದಾರೆ. ಅವರೇ ಲೇಡಿ ಟೈಗರ್ ಮಾಲಾಶ್ರೀ. ಭಾನುವಾರದ ಎಪಿಸೋಡ್ ನಲ್ಲಿ ಮಾಲಾಶ್ರೀ ಸ್ಪರ್ಧಿಯಾಗಿಯೇ ಎಂಟ್ರಿಯಾದರು.
ಸಹಜವಾಗಿಯೇ ಹೊಸ ಸದಸ್ಯನನ್ನು ಬಿಗ್ ಬಾಸ್ ಮನೆಯ ಸದಸ್ಯರು ಖುಷಿಯಿಂದಲೇ ಸ್ವಾಗತಿಸಿದರು. ಸುದೀಪ್ ಅವರ ಜತೆ ಸಂವಾದ ನಡೆಸುತ್ತಾ ಮಾಲಾ ಶ್ರೀ ಮನೆಯಲ್ಲಿರುವವರ ಬಗ್ಗೆ ತಿಳಿದುಕೊಂಡರು. ಮನೆಯವರೂ ಮಾಲಾಶ್ರೀಗಾಗಿ ಕುಣಿದರು.
ಈ ದಿನದ ಎಪಿಸೋಡ್ ನಲ್ಲಿ ಪರಸ್ಪರ ತಮಾಷೆ ಮಾಡುತ್ತಾ ಖುಷಿಯಿಂದಲೇ ಕಳೆದರು. ಆದರೆ ಮಾಲಾಶ್ರೀ ಎಂಟ್ರಿ ಯಾರಿಗೆ ಎಷ್ಟು ನಿಜವಾಗಿಯೂ ಖುಷಿ ತಂದಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ. ಅಲ್ಲದೆ ಮಾಲಾಶ್ರೀ ನಿಜವಾಗಿಯೂ ಸ್ಪರ್ಧಿಯಾಗಿ ಬಂದಿದ್ದಾರೋ, ಅತಿಥಿಯಾಗಿ ಬಂದಿದ್ದಾರೋ ಎಂದೂ ಇತರ ಸದಸ್ಯರ ನಡುವೆ ಚರ್ಚೆಯೂ ನಡೆಯಿತು.
ಇದಕ್ಕೂ ಮೊದಲು ಮಾಳವಿಕಾ ಅವರನ್ನು ಈ ವಾರದ ನಾಯಕಿಯಾಗಿ ಆರಿಸಲಾಯಿತು. ನಾಮಿನೇಷನ್ ಪ್ರಕ್ರಿಯೆ ಇಂದು ನಡೆಯಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ