Webdunia - Bharat's app for daily news and videos

Install App

ಮಗುವಿನ ಕೈಯಲ್ಲಿ ಕೆಲಸ ಮಾಡಿಸಿ ವೀಕ್ಷಕರ ಕೆಂಗಣ್ಣಿಗೆ ಗುರಿಯಾದ ಲಕ್ಷ್ಮೀ ನಿವಾಸ ಸೀರಿಯಲ್

Lakshmi nivasa
Krishnaveni K
ಶುಕ್ರವಾರ, 16 ಫೆಬ್ರವರಿ 2024 (15:43 IST)
Photo Courtesy: Instagram
ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ನಿವಾಸ ಧಾರವಾಹಿ ಇದೀಗ ವೀಕ್ಷಕರಿಂದ ಭಾರೀ ಟೀಕೆಗೊಳಗಾಗಿದೆ. ಇದಕ್ಕೆ ಕಾರಣ ಮೊನ್ನೆಯ ಎಪಿಸೋಡ್ ನಲ್ಲಿ ಪ್ರಸಾರವಾದ ಒಂದು ದೃಶ್ಯ.

ಲಕ್ಷ್ಮೀ ನಿವಾಸ ಧಾರವಾಹಿ ಇತ್ತೀಚೆಗಷ್ಟೇ ಪ್ರಸಾರ ಆರಂಭಿಸಿದ ಧಾರವಾಹಿ. ಸ್ಯಾಂಡಲ್ ವುಡ್ ಹೀರೋಯಿನ್ ಶ್ವೇತಾ, ಹಿರಿಯ ನಟಿ ಲಕ್ಷ್ಮೀ, ಚಂದನಾ ಅನಂತಕೃಷ್ಣ, ದಿಶಾ ಮದನ್ ಮುಂತಾದವರು ನಟಿಸುತ್ತಿರುವ ಧಾರವಾಹಿ ಇದಾಗಿದೆ. ಮದುವೆ ದಿನವೇ ವರ ಸಾವನ್ನಪ್ಪಿದ ಬಳಿಕ ನಾಯಕಿ ಭಾವನಾ ವರನ ಮಗಳನ್ನೇ ತನ್ನ ಮಗುವೆಂದು ಸಾಕಲು ಹೊರಟಿದ್ದಳು. ಆದರೆ ಪೊಲೀಸರು ಮಧ‍್ಯಪ್ರವೇಶಿಸಿ ಮಗುವನ್ನು ಮರಳಿ ಆಕೆಯ ಸೋದರತ್ತೆಯ ಕೈಗೊಪ್ಪಿಸಿದರು. ಅತ್ತ ಅಪ್ಪ-ಅಮ್ಮನನ್ನು ಕಳೆದುಕೊಂಡಿರುವ ಮಗು ಈಗ ಸೋದರತ್ತೆಯ ಗಂಡನ ದಬ್ಬಾಳಿಕೆಗೊಳಗಾಗಿರುವ ಸನ್ನಿವೇಶ ಧಾರವಾಹಿಯಲ್ಲಿ ನಡೆಯುತ್ತಿದೆ.

ಐದಾರು ವರ್ಷದ ಪುಟ್ಟ ಮಗುವಿನ ಕೈಯಲ್ಲಿ ನೆಲ ಒರೆಸುವ ಕೆಲಸ ಮಾಡುವ ದೃಶ್ಯವೊಂದು ಮೊನ್ನೆ ಪ್ರಸಾರವಾಗಿತ್ತು. ಈ ದೃಶ್ಯದ ಬಗ್ಗೆ ವೀಕ್ಷಕರು ಆಕ್ಷೇಪವೆತ್ತಿದ್ದಾರೆ. ಚಿಕ್ಕ ಮಗುವಿನ ಕೈಯಲ್ಲಿ ಕೆಲಸ ಮಾಡಿಸುವಂತಹ ಕ್ರೌರ್ಯತೆಯನ್ನು ಯಾಕೆ ತೋರಿಸುತ್ತಿದ್ದೀರಿ? ಇದು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಮ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಕ್ಕಳನ್ನು ಧಾರವಾಹಿಯಲ್ಲಿ ಬಳಸುವಾಗ ಶೋಷಣೆಗೊಳಗಾದಂತೆ ನೋಡಿಕೊಳ್ಳಬೇಕು. ಆದರೆ ಧಾರವಾಹಿ ದೃಶ್ಯದ ಹೆಸರಿನಲ್ಲಿ ಇಂತಹ ಸನ್ನಿವೇಶವನ್ನು ತೋರಿಸುವ ಅಗತ್ಯವಿತ್ತೇ ಎಂದು ವೀಕ್ಷಕರು ಕಿಡಿ ಕಾರಿದ್ದಾರೆ. ಇದಕ್ಕೆ ಧಾರವಾಹಿ ತಂಡ ಯಾವ ರೀತಿ ಪ್ರತಿಕ್ರಿಯಿಸುತ್ತೋ ಕಾದು ನೋಡಬೇಕಿದೆ.

ಇತ್ತೀಚೆಗೆ ಸುವರ್ಣ ವಾಹಿನಿಯ ಧಾರವಾಹಿಯೊಂದು ಕಾಂತಾರ ಸಿನಿಮಾದಂತೆ ಕರಾವಳಿಯ ದೈವಗಳ ಬಗ್ಗೆ ದೃಶ್ಯ ಚಿತ್ರೀಕರಿಸಿ ವಿವಾದಕ್ಕೀಡಾಗಿತ್ತು. ಕೆಲವು ದಿನಗಳ ಮೊದಲು ಜೀ ಕನ್ನಡ ವಾಹಿನಿಯ ಭೂಮಿಗೆ ಬಂದ ಭಗವಂತ ಧಾರವಾಹಿ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ ಅಪವಾದಕ್ಕೀಡಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments