Webdunia - Bharat's app for daily news and videos

Install App

ಲಕ್ಷ್ಮೀಗಿಂತ ನಿಮ್ಮ ಆಕ್ಟಿಂಗ್ ಸೂಪರ್: ಲಕ್ಷ್ಮೀ ಬಾರಮ್ಮಾ ಕೀರ್ತಿಗೆ ಸಿಕ್ತು ಜನರಿಂದ ಪ್ರಶಂಸೆ

Lakshmi Baramma serial
Krishnaveni K
ಶುಕ್ರವಾರ, 19 ಏಪ್ರಿಲ್ 2024 (11:37 IST)
Photo Courtesy: Instagram
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮೀ ಬಾರಮ್ಮಾ ಧಾರವಾಹಿ ಈಗ ಕುತೂಹಲಕಾರೀ ಘಟ್ಟದಲ್ಲಿದೆ. ಧಾರವಾಹಿಯಲ್ಲಿ ಈಗ ನಾಯಕಿ ಲಕ್ಷ್ಮೀಗೆ ತನ್ನ ಗಂಡ ವೈಷ್ಣವ್ ಮತ್ತು ಆತನ ಮಾಜಿ ಪ್ರೇಯಸಿ ಕೀರ್ತಿ ಬಗ್ಗೆ ಸತ್ಯ ಗೊತ್ತಾಗಿದೆ.

ಧಾರವಾಹಿಯಲ್ಲಿ ಈಗ ಲಕ್ಷ್ಮೀ ಮತ್ತು ಕೀರ್ತಿ ಪಾತ್ರಧಾರಿಗಳು ಪೈಪೋಟಿಗೆ ಬಿದ್ದವರಂತೆ ಅಭಿನಯಿಸುತ್ತಿದ್ದಾರೆ. ತನ್ನ ಗಂಡನ ಮಾಜಿ ಪ್ರೇಯಸಿ ಬೇರೆ ಯಾರೂ ಅಲ್ಲ, ಕೀರ್ತಿ ಎಂದು ತಿಳಿದು ಲಕ್ಷ್ಮೀ ಆಕೆಯ ಮನೆಗೆ ಸಿಟ್ಟಿನಿಂದ ಬರುತ್ತಾಳೆ. ನನ್ನ ಮತ್ತು ನನ್ನ ಗಂಡನ ನಡುವೆ ಬರಲು ನೀನು ಯಾರು ಎಂದು ಕೋಪದಿಂದ ಪ್ರಶ್ನಿಸುತ್ತಾಳೆ.

ಇದಕ್ಕೆ ಕೀರ್ತಿ ನಿಮ್ಮ ನಡುವೆ ಬಂದಿದ್ದು ನಾನಲ್ಲ, ನೀನೇ ನನ್ನ, ವೈಷ್ಣವ್ ನಡುವೆ ಬಂದಿದ್ದು ಎಂದು ಇಷ್ಟು ದಿನ ಮುಚ್ಚಿಟ್ಟಿದ್ದ ಸತ್ಯವನ್ನೆಲ್ಲಾ ಬಾಯ್ಬಿಟ್ಟಿದ್ದಾಳೆ. ಕೀರ್ತಿಯ ಸಿಟ್ಟು, ಹತಾಶೆ, ತಾಳ್ಮೆಯ ಕಟ್ಟೆ ಎಲ್ಲವೂ ಒಡೆದು ಲಕ್ಷ್ಮೀ ಮೇಲೆ ಮೈಮೇಲೆ ಆವೇಶ ಬಂದವಳಂತೆ ಕೂಗಾಡುತ್ತಾಳೆ.

ಕೀರ್ತಿ ನಾಯಕಿ ಲಕ್ಷ್ಮೀ ಪಾಲಿಗೆ ಖಳನಾಯಕಿಯಾದರೂ ವೀಕ್ಷಕರಿಗೆ ಆಕೆಯ ಅಭಿನಯ ಇಷ್ಟವಾಗುತ್ತಿದೆ. ಹೀಗಾಗಿ ನಾಯಕಿಯನ್ನೂ ಮೀರಿದ ಅಭಿನಯ ಮಾಡಿದ್ದಾರೆ ಎಂದು ಹೊಗಳುತ್ತಿದ್ದಾರೆ. ಈ ಧಾರವಾಹಿಯಲ್ಲಿ ಕೀರ್ತಿ ಪಾತ್ರ ಮಾಡುತ್ತಿರುವುದು ತನ್ವಿ ರಾವ್. ಈಕೆ ಮೂಲತಃ ಭರತನಾಟ್ಯ ಕಲಾವಿದೆ. ಹೀಗಾಗಿ ಮುಖದಲ್ಲಿ ಭಾವಗಳನ್ನು ಅದ್ಭುತವಾಗಿ ತೋರಿಸುತ್ತಿದ್ದಾರೆ. ಈ ಹಿಂದೆಯೂ ಇಂತಹ ಭಾವನಾತ್ಮಕ ಸನ್ನಿವೇಶಗಳನ್ನು ಅದ್ಭುತವಾಗಿ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿದ್ದರು. ಇದೀಗ ಖಳನಾಯಕಿಯಾದರೂ ಮತ್ತೊಮ್ಮೆ ಕೀರ್ತಿ ಪ್ರೇಕ್ಷಕರ ಮನಗೆದ್ದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments