Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಅಡುಗೆ ಮನೆಯಲ್ಲಿ ಕಿಚ್ಚ ಸುದೀಪ್‌ಗೇನು ಕೆಲಸ?

ಕಿಚ್ಚ ಸುದೀಪ್
Bangalore , ಬುಧವಾರ, 30 ನವೆಂಬರ್ 2016 (08:50 IST)
ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 4 ಪ್ರಸಾರ ಆಗ್ತಾ ಇರೋದು ಗೊತ್ತೇ ಇದೆ. ಈಗಾಗಲೆ 50 ಕಂತುಗಳನ್ನ ಪೂರೈಸಿದೆ ಈ ಶೋ. ಐವತ್ತನೇ ಎಪಿಸೋಡಿನ ವಿಶೇಷ ಏನೆಂದರೆ ಬಾಣಸಿಗನಾಗಿ ಕಿಚ್ಚ್ ಸುದೀಪ್ ಕಾಣಿಸಿಕೊಂಡಿರುವುದು.
 

ಸುದೀಪ್ ಅವರಲ್ಲೂ ಒಬ್ಬ ಒಳ್ಳೆ ಅಡುಗೆ ಭಟ್ರಿದ್ದಾರೆ ಅಂತ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಸುದೀಪ್ ಅವ್ರು ಸ್ವತಃ ತಾವೇ ಬಿಗ್‍ಬಾಸ್ ಸೆಟ್ಟಲ್ಲಿ ಎಲ್ಲರಿಗೂ ಅವರವರ ಇಷ್ಟದ ಅಡುಗೆ ಮಾಡಿ, ಅದನ್ನು ನೀಟಾಗಿ ಪ್ಯಾಕು ಮಾಡಿಸಿ ಪ್ರತಿಯೊಂದರ ಮೇಲೆಯೂ ಆಯಾ ಸ್ಪರ್ಧಿಗಳ ಹೆಸರು ಬರೆದು ಕಳಿಸಿದ್ದಾರೆ.
 
ಅವರು ಏನೆಲ್ಲಾ ಮಾಡಿದ್ದಾರೆ ಅಂತ ತಿಳಿದುಕೊಂಡ್ರೆ ಬಹುಶಃ ಸುದೀಪ್ ಮನೆಯವರೂ ಛೇ ಎಂಥಾ ಛಾನ್ಸ್ ಮಿಸ್ ಆದ್ವಲ್ಲಾ ಅಂದುಕೊಳ್ತಾರೆ. ವೆಜ್ ಬಿರಿಯಾನಿ, ಚಿಕನ್ ಬಿರಿಯಾನಿ, ಮಂಗಳೂರು ಬಜ್ಜಿ, ಚಿಲ್ಲಿ ಪನೀರ್, ಚಿಕನ್ ಅಪ್ರಿಕಾರ್ಟ್, ಚೀಸ್ ಎಗ್, ಇದರ ಜೊತೆಗೆ ಮಾರ್ಬಲ್ ಕೇಕ್ ಕೂಡ ಮಾಡಿ ಕಳುಹಿಸಿದ್ದಾರೆ. ಈ ಮೂಲಕ ಬಿಗ್ ಬಾಸ್ ಸ್ಪರ್ಧಿಗಳಿಗೆ ಸುದೀಪ್ ಕೈರುಚಿ ನೋಡುವ ಸೌಭಾಗ್ಯ ಸಿಕ್ಕಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರಿಗಳಿಗೆ ಅಂಗಚ್ಛೇದನ ಮಾಡ್ಬೇಕು: ಮೀರಾ ಜಾಸ್ಮಿನ್