Select Your Language

Notifications

webdunia
webdunia
webdunia
webdunia

ತಾಯಿಯಾಗುತ್ತಿರುವ ಸಂತೋಷ ಹಂಚಿಕೊಂಡ ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ

ತಾಯಿಯಾಗುತ್ತಿರುವ ಸಂತೋಷ ಹಂಚಿಕೊಂಡ ಕನ್ನಡ ಕಿರುತೆರೆ ನಟಿ ಕಾವ್ಯಾ ಗೌಡ
ಬೆಂಗಳೂರು , ಶನಿವಾರ, 2 ಡಿಸೆಂಬರ್ 2023 (17:25 IST)
ಬೆಂಗಳೂರು: ಕನ್ನಡ ಕಿರುತೆರೆಯ ಖ್ಯಾತ ನಟಿ ಕಾವ್ಯಾ ಗೌಡ ತಾಯಿಯಾಗುತ್ತಿರುವ ಸಂತೋಷ ಸುದ್ದಿಯನ್ನು ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಕಾವ್ಯಾ ಉದ್ಯಮಿ ಸೋಮಶೇಖರ್ ಜೊತೆ 2021 ರಲ್ಲಿ ಮದುವೆಯಾಗಿದ್ದರು. ಇಬ್ಬರದ್ದೂ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಆಗಿತ್ತು. ಇಂದು ಕಾವ್ಯಾ-ಸೋಮಶೇಖರ್ ದಂಪತಿ ಮದುವೆ ವಾರ್ಷಿಕೋತ್ಸವ ಸಂಭ್ರಮ.

ಈ ಸಂಭ್ರಮದ ನಡುವೆಯೇ ಕಾವ್ಯಾ ಈ ಸಂತೋಷದ ಸುದ್ದಿಯನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. 2024 ರಲ್ಲಿ  ಮಗುವಿನ ಆಗಮನವಾಗಲಿದೆ ಎಂದು ಕಾವ್ಯಾ ಹೇಳಿದ್ದಾರೆ. ಜೊತೆಗೆ ಬೇಬಿ ಬಂಪ್ ಫೋಟೋ ಶೂಟ್ ನ ಕ್ಷಣಗಳನ್ನೂ ಹಂಚಿಕೊಂಡಿದ್ದಾರೆ.

ಕಿರುತೆರೆಯಲ್ಲಿ ಗಾಂಧಾರಿ, ಶುಭ ವಿವಾಹ, ರಾಧಾ ರಮಣ ಸೇರಿದಂತೆ ಕೆಲವು ಧಾರವಾಹಿಗಳಲ್ಲಿ ನಟಿಸಿದ್ದ ಕಾವ್ಯಾ ತಮ್ಮದೇ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಇದೀಗ ದಂಪತಿಯ ಶುಭ ಸುದ್ದಿಗೆ ಫ್ಯಾನ್ಸ್, ಕಿರುತೆರೆ ಸ್ನೇಹಿತರು ಶುಭಾಶಯ ಕೋರುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲ್ಲು ಅರ್ಜುನ್ ಗೆ ಬೆನ್ನು ನೋವು: ಪುಷ್ಪ 2 ಶೂಟಿಂಗ್ ಸ್ಥಗಿತ