Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ವೇಳೆಯೂ ಪರಸ್ಪರ ಭೇಟಿಯಾದ ಹಳೆಯ ಜೋಡಿ ಶೈನ್ ಶೆಟ್ಟಿ-ಕವಿತಾ ಗೌಡ

ಶೈನ್ ಶೆಟ್ಟಿ
ಬೆಂಗಳೂರು , ಸೋಮವಾರ, 27 ಏಪ್ರಿಲ್ 2020 (09:10 IST)
ಬೆಂಗಳೂರು: ಬಿಗ್ ಬಾಸ್ ಗಿಂತ ಮೊದಲು ನಟ ಶೈನ್ ಶೆಟ್ಟಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಲಕ್ಷ್ಮೀ ಬಾರಮ್ಮಾ’ ಧಾರವಾಹಿಯಲ್ಲಿ ಕೆಲವು ದಿನ ನಾಯಕ ಚಂದು ಪಾತ್ರ ಮಾಡುತ್ತಿದ್ದರು. ಆ ಧಾರವಾಹಿಯಲ್ಲಿ ತಮಗೆ ಜೋಡಿಯಾಗಿದ್ದ ಚಿನ್ನು ಅಲಿಯಾಸ್ ಕವಿತಾ ಗೌಡರನ್ನು ಶೈನ್ ಈಗ ಮತ್ತೆ ಭೇಟಿಯಾಗಿದ್ದಾರೆ.


ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದ್ದು, ಶೈನ್ ಶೆಟ್ಟಿ ಈಗ ತಮ್ಮ ತಂಡದವರ ಜತೆ ಬಡವರಿಗೆ ಆಹಾರ ಸಾಮಗ್ರಿ ಒದಗಿಸುವ ಕೆಲಸ ನಿರಂತರವಾಗಿ ಮಾಡುತ್ತಿದ್ದಾರೆ. ಇದರ ನಡುವೆಯೇ ನಟಿ ಕವಿತಾ ಗೌಡರನ್ನು ಶೈನ್ ಭೇಟಿಯಾಗಿದ್ದಾರೆ.

ಈ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿರುವ ಕವಿತಾ ಗೌಡ ಮತ್ತೆ ನಿನ್ನ ಭೇಟಿಯಾಗಿದ್ದು ಖುಷಿಯಾಯಿತು. ಬಿಗ್ ಬಾಸ್ ಗೆದ್ದ ಮೇಲೂ ನೀನು ಸ್ವಲ್ಪವೂ ಬದಲಾಗಿಲ್ಲ ಎಂದು ಖುಷಿಯಿಂದಲೇ ಬರೆದುಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭರ್ಜರಿಯಾಗಿದೆ ಯುವರಾಜ್ ಫಸ್ಟ್ ಲುಕ್