Publish Date: Sat, 13 May 2017 (10:47 IST)
Updated Date: Sat, 13 May 2017 (10:51 IST)
ಬೆಂಗಳೂರು: ಅಭಿಮಾನಿಗಳ ಬಹುದಿನದ ಬೇಡಿಕೆಯನ್ನು ಝಿ ಕನ್ನಡ ವಾಹಿನಿ ಪೂರೈಸಿದೆ. ಇಂದು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನಟ, ನಿರ್ದೇಶಕ ಕಾಶೀನಾಥ್ ಅತಿಥಿಯಾಗಿ ಆಗಮಿಸಲಿದ್ದಾರೆ.
ಉಪೇಂದ್ರ ಸೇರಿದಂತೆ ಇಂದಿನ ಸ್ಟಾರ್ ನಟರನ್ನು ಹುಟ್ಟು ಹಾಕಿದ ಕಾಶೀನಾಥ್ ರನ್ನು ಸಾಧಕರ ಸೀಟಿನಲ್ಲಿ ಕೂರಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಒತ್ತಾಯಗಳು ಕೇಳಿ ಬರುತ್ತಿತ್ತು.
ತಮ್ಮ ಗುರುವಿನ ಬಗ್ಗೆ ನಟ ಉಪೇಂದ್ರ ವಿಶೇಷವಾಗಿ ಮಾತನಾಡಿರುವುದು ವೀಕ್ಷಕರಲ್ಲಿ ಕುತೂಹಲ ಹುಟ್ಟು ಹಾಕಿದೆ. ಅನುಭವದಂತಹ ಅತ್ಯುತ್ತಮ ಚಿತ್ರಗಳನ್ನು ಕನ್ನಡ ಪ್ರೇಕ್ಷಕರಿಗೆ ನೀಡಿದ್ದ ಕಾಶಿ ತುಂಬಾ ಸಮಯ ಚಿತ್ರರಂಗದಿಂದ ದೂರವಿದ್ದರು. ಇತ್ತೀಚೆಗೆ ಕಾಶೀನಾಥ್ ಚೌಕ ಚಿತ್ರದಲ್ಲಿ ಅಪ್ಪನ ಪಾತ್ರ ಮಾಡಿ ಗಮನ ಸೆಳೆದಿದ್ದರು. ಆ ಚಿತ್ರದಲ್ಲಿ ಅವರು ಅಭಿನಯಸಿದ್ದ ಎರಡು ಹಾಡುಗಳು ಸೂಪರ್ ಹಿಟ್ ಆಗಿವೆ. ವೀಕೆಂಡ್ ನಲ್ಲಿ ಅವರು ಏನೇನು ಹೇಳ್ತಾರೆ ಎಂದು ನೋಡುವುದಕ್ಕೆ ರಾತ್ರಿ 9 ಗಂಟೆಗೆ ಜೀ ವಾಹಿನಿ ಟ್ಯೂನ್ ಮಾಡಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ