Publish Date: Sat, 13 May 2017 (08:41 IST)
Updated Date: Sat, 13 May 2017 (08:43 IST)
ಬೆಂಗಳೂರು: ಕಿಚ್ಚ ಸುದೀಪ್ ಕೆಲವು ದಿನಗಳಿಂದ ಲಂಡನ್ ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲಿ ಅವರೇನು ಮಾಡುತ್ತಿದ್ದಾರೆ ಗೊತ್ತಾ?
ಕುಟುಂಬದವರ ಜತೆ ಹಾಲಿಡೇ ಟ್ರಿಪ್ ಮಾಡ್ತಾ ಇಲ್ಲ. ಜಾಲಿಯಾಗಿ ಸುತ್ತಾಡಲೂ ಹೋಗಿಲ್ಲ. ಅವರು ಲಂಡನ್ ಗೆ ಹೋಗಿದ್ದು ಶೂಟಿಂಗ್ ಗಾಗಿ. ಶಿವರಾಜ್ ಕುಮಾರ್ ಜತೆಯಾಗಿ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ದಿ ವಿಲನ್ ಸಿನಿಮಾ ಮಾಡುತ್ತಿದ್ದಾರೆ.
ಆ ಸಿನಿಮಾದ ಶೂಟಿಂಗ್ ಗಾಗಿ ಸುದೀಪ್ ಲಂಡನ್ ಗೆ ತೆರಳಿದ್ದಾರೆ. ಅವರು ಅಲ್ಲಿನ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಓಡಾಡುತ್ತಿರುವುದನ್ನು ನೋಡಿದ ಅಭಿಮಾನಿಗಳು ಸೆಲ್ಫೀಗಾಗಿ ಮುಗಿಬಿದ್ದರು. ಕಿಚ್ಚ ಕೂಡಾ ಖುಷಿಯಿಂದ ಅಭಿಮಾನಿಗಳ ಜತೆ ಸೆಲ್ಫೀಗೆ ಪೋಸ್ ಕೊಟ್ಟರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ