ತಮ್ಮದೇ ಆಪ್, ಚಾನೆಲ್ ಶುರು ಮಾಡಿಕೊಂಡ ಕನ್ನಡ ಕಿರುತೆರೆ ನಟಿಯರು

Webdunia
ಶನಿವಾರ, 11 ಜುಲೈ 2020 (09:25 IST)
ಬೆಂಗಳೂರು: ಲಾಕ್ ಡೌನ್ ವೇಳೆ ಅತ್ತ ಶೂಟಿಂಗ್ ಇಲ್ಲದೇ ಕೂತಿದ್ದಾಗ ಹುಟ್ಟಿಕೊಂಡ ಪರಿಕಲ್ಪನೆಗಳಿಗೆ ಕನ್ನಡ ಕಿರುತೆರೆ ನಟಿಯರಾದ ವೈಷ್ಣವಿ ಗೌಡ, ಅಮೃತಾ ರಾಮಮೂರ್ತಿ ಚಾಲನೆ ನೀಡಿದ್ದಾರೆ.


ಅಗ್ನಿಸಾಕ್ಷಿ ಖ್ಯಾತಿಯ ನಟಿ ವೈಷ್ಣವಿ ಗೌಡ ತಮ್ಮ ಯೂ ಟ್ಯೂಬ್ ಚಾನೆಲ್ ತೆರೆದಿದ್ದು ಆ ಮೂಲಕ ಯೋಗ ಪಾಠ ಹೇಳಿಕೊಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯೋಗದ ವಿವಿಧ ಭಂಗಿಗಳನ್ನು ಪೋಸ್ಟ್ ಮಾಡಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದ ವೈಷ್ಣವಿ ಇದೀಗ ತಮ್ಮದೇ ಎಕ್ಸ್ ಕ್ಲೂಸಿವ್ ಚಾನೆಲ್ ತೆರೆದಿದ್ದಾರೆ.

ಅದೇ ರೀತಿ ಕುಲವಧು ಧಾರವಾಹಿ ಖ್ಯಾತಿಯ ನಟಿ ಅಮೃತಾರಾಮಮೂರ್ತಿ ತಮ್ಮದೇ ಆಪ್ ಲಾಂಚ್ ಮಾಡಿದ್ದಾರೆ. ಇದರಲ್ಲಿ ಮೆಚ್ಚಿನ ಬ್ರಾಂಡ್ ಗಳು, ಅಡುಗೆ ವಿಡಿಯೋಗಳು, ಲೈವ್ ಚ್ಯಾಟ್ ಮಾಡುವ ಯೋಜನೆಗಳನ್ನು ಅವರು ಹಾಕಿಕೊಂಡಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಅತೀ ಹೆಚ್ಚು ಯೂ ಟ್ಯೂಬ್ ಚಾನೆಲ್ ಗಳು, ಆನ್ ಲೈನ್ ಪೋರ್ಟಲ್ ಗಳನ್ನು ತೆರೆಯಲು ಜನರು ಆಸಕ್ತಿ ತೋರಿದ್ದಾರೆ. ಅದರದ್ದೇ ಮುಂದುವರಿದ ಭಾಗ ಇದಾಗಿದೆ. ಈ ನಟಿಯರು ತಮ್ಮಲ್ಲಿರುವ ಇನ್ನೊಂದು ಪ್ರತಿಭೆಯ ಅನಾವರಣಕ್ಕಾಗಿ ಆನ್ ಲೈನ್ ಚಾನೆಲ್ ಗಳ ಮೊರೆ ಹೋಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments