Publish Date: Wed, 14 Jun 2017 (11:13 IST)
Updated Date: Wed, 14 Jun 2017 (11:16 IST)
ಬೆಂಗಳೂರು: ಪರಸ್ಪರ ಪ್ರೀತಿಸಿ, ಕೆಲವು ದಿನಗಳ ಕಾಲ ಸಹಜೀವನ ನಡೆಸಿ ಕೈ ಕೊಟ್ಟ ಪ್ರೇಮಿ ವಿರುದ್ಧ ಕಿರುತೆರೆ ನಟಿ ಪೊಲೀಸರಿಗೆ ದೂರಿತ್ತಿದ್ದಾರೆ.
ಈ ನಟಿ ಮೈಸೂರು ಮೂಲದವರೆನ್ನಲಾಗಿದೆ. ಆಕೆ ಪ್ರೀತಿಸಿದ ಯುವಕ ಖಾಸಗಿ ಸಂಸ್ಥೆಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಉಲ್ಲಾಸ್ ಎಂದು ಗುರುತಿಸಲಾಗಿದೆ. ಕಳೆದ 8 ತಿಂಗಳಿನಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಅಲ್ಲದೆ ಬೆಂಗಳೂರಿನಲ್ಲೇ ಕಳೆದ ಎರಡು ತಿಂಗಳಿನಿಂದ ಒಂದೇ ಮನೆಯಲ್ಲಿದ್ದುಕೊಂಡು ಲಿವಿಂಗ್ ಟುಗೆದರ್ ಸಂಬಂಧವಿತ್ತು ಎಂದು ಖಾಸಗಿ ವಾಹಿನಿಗಳು ವರದಿ ಮಾಡಿವೆ.
ಆದರೆ ತನ್ನ ಊರಿಗೆ ಹೋಗಿ ಬರುವಷ್ಟರಲ್ಲಿ ಪ್ರೇಮಿ ನಾಪತ್ತೆಯಾಗಿದ್ದ. ಮೊಬೈಲ್ ಗೆ ಕರೆ ಮಾಡಿದಾಗಲೂ ಸರಿಯಾದ ಉತ್ತರ ಬರಲಿಲ್ಲ. ಇದೇ ಕಾರಣಕ್ಕೆ ನಟಿ ಇದೀಗ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಎನ್ನಲಾಗಿದೆ.