Publish Date: Tue, 13 Jun 2017 (09:31 IST)
Updated Date: Tue, 13 Jun 2017 (09:34 IST)
ಮುಂಬೈ: ಬಾಲಿವುಡ್ ನಟಿ ಕೃತಿಕಾ ಚೌಧರಿ ಮೃತದೇಹ ಅವರ ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಇದೊಂದೊ ಕೊಲೆ ಕೃತ್ಯವಾಗಿರಬಹುದೆಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾಡೆಲ್ ಹಾಗೂ ನಟಿಯಾಗಿರುವ ಕೃತಿಕಾ ಮನೆಯಲ್ಲೇ ಕೊಳೆತ ಸ್ಥಿತಿಯಲ್ಲಿ ಮೃತದೇಹ ಅವರ ಅಂಧೇರಿ ಬಳಿಯ ನಿವಾಸದಲ್ಲಿ ಪತ್ತೆಯಾಗಿದೆ. ಆಕೆಗೆ 30 ವರ್ಷವಾಗಿತ್ತು. ಒಂದು ಬಾಲಿವುಡ್ ಸಿನಿಮಾ ಹಾಗೂ ಕೆಲವು ಧಾರವಾಹಿಗಳಲ್ಲೂ ಕೃತಿಕಾ ನಟಿಸಿದ್ದರು.
ಆಕೆಯ ಮನೆ ಹೊರಗಿನಿಂದ ಲಾಕ್ ಆಗಿತ್ತು. ಹಾಗೂ ಮೃತದೇಹ ಪತ್ತೆಯಾದ ಕೊಠಡಿಯಲ್ಲಿ ಎ.ಸಿ. ಆನ್ ಆಗಿತ್ತು. ಹೀಗಾಗಿ ಹೊರಗಿದ್ದವರಿಗೆ ವಾಸನೆ ಅಷ್ಟು ಬೇಗ ಬಂದಿರಲಿಲ್ಲ. ಬಹುಶಃ ಇಂದಿಗೆ ಆಕೆ ಸಾವಿಗೀಡಾಗಿ ಮೂರು-ನಾಲ್ಕು ಕಳೆದಿರಬಹುದು. ಮೇಲ್ನೋಟಕ್ಕೆ ಇದೊಂದು ಕೊಲೆಯೆಂದು ಭಾಸವಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದ್ದು, ನಂತರವಷ್ಟೇ ಸ್ಪಷ್ಟ ಉತ್ತರ ಸಿಗಲಿದೆ. ಸದ್ಯಕ್ಕೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.