Publish Date: Mon, 24 Jul 2017 (17:22 IST)
Updated Date: Mon, 24 Jul 2017 (17:26 IST)
ಬೆಂಗಳೂರು: ಸಹನಟ ಭುವನ್ ಗೆ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾದ ನಟ ಪ್ರಥಮ್ ಗೆ ಜಾಮೀನು ಮಂಜೂರಾಗಿದೆ. ಆದರೆ ನ್ಯಾಯಾಲಯದಲ್ಲಿ ಮಧ್ಯೆ ಬಾಯಿ ಹಾಕಲು ಹೊರಟಿದ್ದಕ್ಕೆ ನ್ಯಾಯಾಧೀಶರು ಗರಂ ಆದ ಪ್ರಕರಣವೂ ನಡೆದಿದೆ.
ಎಲ್ಲೇ ಹೋದರೂ ಒಳ್ಳೆ ಹುಡುಗ ಎಂದು ಹೇಳಿಕೊಳ್ಳುವ ಪ್ರಥಮ್ ನ್ಯಾಯಾಲಯದಲ್ಲೂ ಈಗ ನಡೆದಿರುವ ಪ್ರಕರಣದ ಬಗ್ಗೆ ಕೇಳಿದರೆ, ನ್ಯಾಯಾಧೀಶರ ಮುಂದೆ ನಾನು ಒಳ್ಳೆ ಹುಡುಗ. ಬಿಗ್ ಬಾಸ್ ನಲ್ಲಿ ಗೆದ್ದ ಹಣವನ್ನು ರೈತರಿಗೆ ಕೊಟ್ಟಿದ್ದೇನೆ ಎಂದೆಲ್ಲಾ ಬೇರೆ ಉತ್ತರ ಕೊಟ್ಟಿದ್ದಕ್ಕೆ ನ್ಯಾಯಾಧೀಶರು ಗರಂ ಆದ ಪ್ರಕರಣ ನಡೆಯಿತೆಂದು ಖಾಸಗಿ ಮಾಧ್ಯಮ ವರದಿ ಮಾಡಿದೆ.
ಕೊನೆಗೆ ಇನ್ನು ಈ ರೀತಿಯ ಎಡವಟ್ಟು ಮಾಡಿಕೊಳ್ಳುವುದಿಲ್ಲ ಎಂಬ ಭರವಸೆ ನೀಡಿದ ಬಳಿಕ ನ್ಯಾಯಾಲಯ ಪ್ರಥಮ್ ಗೆ ಷರತ್ತು ಬದ್ಧ ಜಾಮೀನು ನೀಡಿತು. ಈ ವೇಳೆ ಪ್ರಥಮ್ ಮಾಧ್ಯಮಗಳೊಂದಿಗೆ ಸ್ಪಷ್ಟವಾಗಿ ಏನನ್ನೂ ಹೇಳಲು ನಿರಾಕರಿಸಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ