Select Your Language

Notifications

webdunia
webdunia
webdunia
webdunia

ಮಲೆಯಾಳಂ ಖ್ಯಾತ ನಟಿಯ ಅರೆನಗ್ನ ಚಿತ್ರಗಳು ವೈರಲ್: ಆರೋಪಿ ಅರೆಸ್ಟ್

ಮಲೆಯಾಳಂ ಖ್ಯಾತ ನಟಿಯ ಅರೆನಗ್ನ ಚಿತ್ರಗಳು ವೈರಲ್: ಆರೋಪಿ ಅರೆಸ್ಟ್
ತಿರುವನಂತಪುರಂ , ಸೋಮವಾರ, 24 ಜುಲೈ 2017 (17:01 IST)
ಮಲೆಯಾಳಂ ಚಿತ್ರರಂಗಕ್ಕೆ ಯಾಕೋ ಟೈಮ್ ಸರಿಯಿದ್ದಂತಿಲ್ಲ. ದಿಲೀಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಬ್ಬ ನಟಿಯ ನಗ್ನ ಚಿತ್ರಗಳು ಆನ್‌ಲೈನ್‌ನಲ್ಲಿ ರಾರಾಜಿಸುತ್ತಿವೆ.
ಮಲೆಯಾಳಂ ಚಿತ್ರರಂಗದ ಹಾಟ್ ನಟಿ ಮೈಥಿಲಿಯ ಖಾಸಗಿ ಚಿತ್ರಗಳು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿರುವ ಆರೋಪದ ಮೇಲೆ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಕಿರನ್ ಕುಮಾರ್ ಎಂಬಾತನನ್ನು ಬಂಧಿಸಲಾಗಿದೆ.
    
ಮೊದಲಿಗೆ ನಟಿ ಮೈಥಿಲಿ ಮತ್ತು ಕಿರನ್ ಕುಮಾರ್ ಮಧ್ಯೆ ಆತ್ಮಿಯ ಸಂಬಂಧವಿತ್ತು. ನಂತರ ಇಬ್ಬರ ನಡುವೆ ವೈಮನಸ್ಸು ಏರ್ಪಟ್ಟಿದೆ. ನಂತರ ಕಿರಣ್ ಮೈಥಿಲಿಗೆ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದನು ಎನ್ನಲಾಗಿದೆ. ಆದರೆ, ಮೈಥಿಲಿ ಹಣ ಕೊಡಲು ನಿರಾಕರಿಸಿದಾಗ ಆಕೆಯ ಖಾಸಗಿ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಫೋಟೋಗಳು ವೈರಲ್ ಆಗಿವೆ. 
 
ಆನ್‌ಲೈನ್‌ನಲ್ಲಿ ತನ್ನ ನಗ್ನ ಚಿತ್ರಗಳನ್ನು ಕಂಡ ನಟಿ ಮೈಥಿಲಿ, ಕಿರಣ್ ಕುಮಾರ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ
 
ಆರೋಪಿ ಕಿರಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕೆ ಅಕ್ಷಯ್ ಕುಮಾರ್ ಕ್ಷಮೆ