Publish Date: Mon, 24 Jul 2017 (16:40 IST)
Updated Date: Mon, 24 Jul 2017 (16:43 IST)
ಮುಂಬೈ: ದೇಶಭಕ್ತಿ, ಭಾರತೀಯ ಸೇನೆಗೆ ಸಹಾಯ ಮಾಡುವ ಕೆಲಸದಲ್ಲಿ ಸದಾ ಮುಂಚೂಣಿಯಲ್ಲಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಿಡಿದ ತಪ್ಪಿಗೆ ಕ್ಷಮೆ ಯಾಚಿಸಿದ್ದಾರೆ.
ನಿನ್ನೆ ನಡೆದ ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವನ್ನು ಹುರಿದುಂಬಿಸಲು ಲಾರ್ಡ್ಸ್ ಮೈದಾನದಲ್ಲಿ ಉಪಸ್ಥಿತರಿದ್ದ ಅಕ್ಷಯ್ ರಾಷ್ಟ್ರಧ್ವಜ ಬೀಸುತ್ತಿದ್ದರು. ಈ ವೇಳೆ ತಲೆಕೆಳಗಾಗಿ ರಾಷ್ಟ್ರಧ್ವಜ ಹಿಡಿದಿದ್ದು, ಈ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದರು. ಆದರೆ ಆಗ ಅವರಿಗೆ ಫೋಟೋದಲ್ಲಿದ್ದ ತಮ್ಮ ತಪ್ಪು ಗೊತ್ತಿರಲಿಲ್ಲ.
ಇದು ರಾಷ್ಟ್ರಧ್ವಜ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಪ್ರಮಾದದ ಅರಿವಾಗುತ್ತಿದ್ದಂತೆ ಟ್ವಿಟರ್ ಮೂಲಕ ತಮ್ಮ ತಪ್ಪಿಗೆ ಕ್ಷಮೆ ಯಾಚಿಸಿರುವ ಅಕ್ಷಯ್ ಫೋಟೋವನ್ನು ಕಿತ್ತು ಹಾಕಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ