Webdunia - Bharat's app for daily news and videos

Install App

ವೀಕ್ಷಕರ ವಿರುದ್ಧ ಉರಿದು ಬಿದ್ದ ಜೊತೆ ಜೊತೆಯಲಿ ಧಾರವಾಹಿ ನಟಿ ಮೀರಾ ಹೆಗ್ಡೆ

Webdunia
ಬುಧವಾರ, 15 ಜುಲೈ 2020 (10:19 IST)
ಬೆಂಗಳೂರು: ಧಾರವಾಹಿಯ ಖಳನಟ-ನಟಿಯರೆಂದರೆ ಪ್ರೇಕ್ಷಕರು ಅವರನ್ನು ನಿಜವಾಗಿಯೂ ಕೆಟ್ಟವರೇನೋ ಎಂಬಂತೆ ನೋಡುತ್ತಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸೆನ್ಸೇಷನಲ್ ಧಾರವಾಹಿ ಜೊತೆ ಜೊತೆಯಲಿ ವಿಲನ್ ಪಾತ್ರಧಾರಿ ಮೀರಾ ಹೆಗ್ಡೆ ಅಲಿಯಾಸ್ ನಟಿ ಮಾನಸಾ ಮನೋಹರ್ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ.


ಕಳೆದ ಮೂರು ನಾಲ್ಕು ಸಂಚಿಕೆಗಳಲ್ಲಿ ಪಾತ್ರದ ಮೂಲಕ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾದ ಮೀರಾ ಹೆಗ್ಡೆ ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾ ಮುಗ್ಗಾ ಟೀಕೆಗೊಳಗಾಗಿದ್ದರು. ಆಕೆಯ ಪಾತ್ರದ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದು ನಟಿಗೆ ಬೇಸರವುಂಟು ಮಾಡಿದೆ.

ಇದೇ ಕಾರಣಕ್ಕೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ‘ನನ್ನ ಬಗ್ಗೆ ನೆಗೆಟಿವ್ ಕಾಮೆಂಟ್ ಮಾಡಿದವರ ಬಗ್ಗೆ ನಾನು ಹೆಚ್ಚು ಯೋಚಿಸಲ್ಲ. ಯಾಕೆಂದರೆ ಅವರಿಗೆ ಬೇರೆ ಕೆಲಸವಿಲ್ಲ’ ಎಂದು ಖಾರವಾಗಿ ಬರೆದಿದ್ದರು. ಇದರಿಂದ ಕಿಡಿ ಕಿಡಿಯಾದ ಅಭಿಮಾನಿಗಳು ಇಷ್ಟು ದಿನ ನಿಮ್ಮನ್ನು ಬೆಂಬಲಿಸಿದ್ದಕ್ಕೂ ಸಾರ್ಥಕವಾಯಿತು. ನಮಗೂ ಮಾಡಲು ಕೆಲಸವಿದೆ. ನಾವು ನಿಮ್ಮ ಪಾತ್ರವನ್ನು ಟೀಕಿಸಿದ್ದೆವೇ ಹೊರತು, ವೈಯಕ್ತಿಕವಾಗಿ ನಿಮ್ಮನ್ನು ಟೀಕಿಸಿರಲಿಲ್ಲ. ನೀವು ಅಭಿಮಾನಿಗಳಿಗೆ ಅವಮಾನ ಮಾಡಿದಿರಿ. ಇನ್ನು ಮುಂದೆ ಜೊತೆ ಜೊತೆಯಲಿ ಧಾರವಾಹಿ ನೋಡಲ್ಲ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.

ಈ ಕೆಸರೆರಚಾಟ ತೀವ್ರವಾಗುತ್ತಿದ್ದಂತೇ ಎಚ್ಚೆತ್ತುಕೊಂಡ ನಟಿ ಮಾನಸ ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದ ವಿವಾದಾತ್ಮಕ ಕಾಮೆಂಟ್ ಡಿಲೀಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ಮುಂದಿನ ಸುದ್ದಿ
Show comments