Publish Date: Fri, 10 Feb 2017 (12:45 IST)
Updated Date: Fri, 10 Feb 2017 (12:48 IST)
ಸ್ಟಾರ್ ಸುವರ್ಣ ವಾಹಿನಿಯ ಹೆಮ್ಮೆಯ ’ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಮತ್ತೊಂದು ರೋಚಕ ಘಟ್ಟ ಎದುರಾಗುತ್ತಿದೆ. ಕೈಲಾಸದಲ್ಲಿ ತುಂಟಾಟವಾಡುತ್ತ ಜಗತ್ತಿನ ಮಾತಾ ಪಿತರಾದ ಪಾರ್ವತಿ ಪರಮೇಶ್ವರರನ್ನು ರಂಜಿಸಲು ಗಣೇಶನ ಆಗಮನವಾಗುತ್ತಿದೆ.
ಇದೇ ಸೋಮವಾರ ಅಂದರೆ ಫೆ.13 ರಂದು ಗಣೇಶನ ಜನನವಾಗುತ್ತಿದ್ದು , ಸರ್ವವಿಘ್ನಗಳನ್ನು ನಿವಾರಿಸಲು ಕರುನಾಡ ಮನೆ ಮನೆಗೆ ಗಣೇಶ ಬರುತ್ತಿದ್ದಾನೆ. ಶಿವ ತಪಸ್ಸಿಗೆ ಹೋದ ಸಂದರ್ಭದಲ್ಲಿ ಪಾರ್ವತಿ ಗಣೇಶನಿಗೆ ಜನ್ಮವಿಡುತ್ತಾಳೆ ಮಹಾದೇವ ಮತ್ತೆ ಮರಳುವವರೆಗು ಕೈಲಾಸವೆಲ್ಲ ಗಣೇಶನ ತುಂಟಾಟಕ್ಕೆ ಸಾಕ್ಷಿಯಾಗಿ ಗಣೇಶ ಎಲ್ಲರ ಮುದ್ದಿನ ಕೂಸಾಗುತ್ತಾನೆ.
ಹೀಗೆ ಮಹಾದೇವನ ಚರಿತೆಯೊಂದಿಗೆ ಗಣೇಶನ ಚರಿತೆಯನ್ನು ಕೂಡ ವಾಹಿನಿ ವೀಕ್ಷಕರಿಗೆ ತಲುಪಿಸುತ್ತಿದೆ. ಗಣೇಶನ ಆಗಮನದ ಮಹಾ ಸನ್ನಿವೇಶವನ್ನೊಳಗೊಂಡ ಕಂತು ಇದೇ ಫೆ.13 ರಂದು ರಾತ್ರಿ 7.30 ಕ್ಕೆ ಪ್ರಸಾರವಾಗಲಿದ್ದು ವೀಕ್ಷಕರಿಗೆ ಭಕ್ತಿಪೂರ್ವಕವಾದ ಮನರಂಜನೆಯನ್ನು ನೀಡಲು ಸ್ಟಾರ್ ಸುವರ್ಣ ವಾಹಿನಿ ಸಜ್ಜಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.