Select Your Language

Notifications

webdunia
webdunia
webdunia
webdunia

ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಮನೆಯಲ್ಲಿ ಭೂತದ ಕಾಟ?

ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ಮನೆಯಲ್ಲಿ ಭೂತದ ಕಾಟ?
Bangalore , ಸೋಮವಾರ, 7 ನವೆಂಬರ್ 2016 (09:13 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋ ಮನೆಯಲ್ಲಿ ಸ್ಪರ್ಧಿಗಳಿಗೆ ಭೂತ ಕಾಣಿಸಿಕೊಂಡಿದೆಯಾ? ಹೀಗೊಂದು ಅನುಮಾನ ಈಗ ವೀಕ್ಷಕರಿಗೆ ಕಾಡುತ್ತಿದೆ.

ಇದೆಲ್ಲಾ ನಿಜವಾ ಅಥವಾ ಸ್ಪರ್ಧೆಯ ಭಾಗವಾ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಲರ್ಸ್ ಕನ್ನಡ ಚಾನೆಲ್ ಪ್ರೋಗ್ರಾಮಿಂಗ್ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಈ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಆಗಿದ್ದಿಷ್ಟೇ. ಕನ್ನಡಿ ನೋಡಿಕೊಳ್ಳುತ್ತಿದ್ದಾಗ ಸ್ಪರ್ಧಾಳು ಕಾರುಣ್ಯ ರಾಂ ಏನೋ ವಿಚಿತ್ರ ಆಕೃತಿ ನೋಡಿ ಕಿರುಚಿಕೊಳ್ಳುತ್ತಾರೆ. ಅವರ ಜತೆ ಇದ್ದ ಸಂಜನಾ ಕೂಡಾ ಕಾರುಣ್ಯ ಕಿರುಚಿದ್ದು ನೋಡಿ ತಾವೂ ಕಿರುಚಿಕೊಳ್ಳುತ್ತಾರೆ. ಆದರೆ ಇದು ನಿಜವಾಗಿಯೂ ಭೂತದ ಕಾಟವೇ ಇಲ್ಲಾ, ಕಾರುಣ್ಯ ಅವರನ್ನು ಹೆದರಿಸಲು ಮಾಡಿದ ವ್ಯವಸ್ಥಿತ ಯೋಜನೆಯೇ ಎಂದು ಸ್ಪಷ್ಟವಾಗಿಲ್ಲ.

ಏನೇ ಆಗಲಿ ಈ ಭೂತ ಪ್ರೇತದ ಕತೆಗಳು ಹಿಂದಿ ಬಿಗ್ ಬಾಸ್ ಅವತರಣಿಕೆಯಲ್ಲೂ ಇತ್ತು. ಆದರೆ ವ್ಯಾಪಕ ಟೀಕೆಗಳು ಬಂದ ಮೇಲೆ ನಿಂತಿದೆ. ಇದೀಗ ಕನ್ನಡದಲ್ಲೂ ಇದನ್ನೇ ಬಟ್ಟಿ ಇಳಿಸಿದ್ದಾ ಗೊತ್ತಿಲ್ಲ. ಏನೇ ಆದರೂ ಈ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಚರ್ಚೆಗಳು ಶುರುವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಮಲ್ ಹಾಸನ್-ಗೌತಮಿ ಬಿರುಕಿನ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಶ್ರುತಿ ಹಾಸನ್