Publish Date: Sat, 05 Nov 2016 (14:12 IST)
Updated Date: Sat, 05 Nov 2016 (14:18 IST)
ಚೆನ್ನೈ: ತಂದೆ ಕಮಲ್ ಹಾಸನ್ ಮತ್ತು ಗೌತಮಿ ನಡುವೆ 13 ವರ್ಷಗಳ ಲಿವಿಂಗ್ ಟುಗೆದರ್ ಸಂಬಂಧದಲ್ಲಿ ಬಿರುಕು ಮೂಡಲು ತಾನು ಕಾರಣಳಲ್ಲ ಎಂದು ಪುತ್ರಿ ಶ್ರುತಿ ಹಾಸನ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಶ್ರುತಿ ಇದುವರೆಗೆ ಯಾರ ವೈಯಕ್ತಿಕ ಜೀವನದಲ್ಲೂ ಮೂಗು ತೂರಿಸಿಲ್ಲ ಮತ್ತು ಕಾಮೆಂಟ್ ಮಾಡಿಲ್ಲ. ಆಕೆಗೆ ತನ್ನ ಪ್ರೀತಿಯ ಕುಟುಂಬದವರು, ಹೆತ್ತವರು ಮತ್ತು ತಂಗಿಗೆ ಬೆಂಬಲವಾಗಿ ನಿಲ್ಲುವುದು ಮುಖ್ಯವಾಗುತ್ತದೆ” ಎಂದು ಅಧಿಕೃತ ಹೇಳಿಕೆಯಲ್ಲಿ ವಿವರಿಸಲಾಗಿದೆ.
ಕಮಲ್ ಮತ್ತು ಗೌತಮಿ ಬೇರಾಗಲು ನಿರ್ಧರಿಸಿದ ಮೇಲೆ ಇವರಿಬ್ಬರು ಬೇರಾಗಲು ಕಮಲ್ ಪುತ್ರಿ ಶ್ರುತಿ ಹಾಸನ್ ಅವರೇ ಕಾರಣ. ಗೌತಮಿ ಕಮಲ್ ಜತೆಗಿರುವುದು ಶ್ರುತಿಗೆ ಇಷ್ಟವಿರಲಿಲ್ಲ. ಇವರಿಬ್ಬರೂ ಸಬಾಷ್ ನಾಯ್ಡು ಚಿತ್ರದ ಸೆಟ್ ನಲ್ಲಿ ಜಗಳವಾಡಿಕೊಂಡಿದ್ದರು ಎಂದು ಸುದ್ದಿಯಾಗಿತ್ತು. ಇದೇ ಕಾರಣಕ್ಕೆ ಗೌತಮಿ ಕಮಲ್ ರಿಂದ ದೂರವಾಗಿದ್ದರು ಎನ್ನಲಾಗಿತ್ತು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ