Webdunia - Bharat's app for daily news and videos

Install App

ಕಿರುತೆರೆಗೆ ಎಂಟ್ರಿ ಕೊಟ್ಟ ಚಂದ್ರು: ಇನ್ಮೊಂದೆ ಒನ್‌ಮೋರ್‌ ಒನ್‌ಮೋರ್‌ ಅನ್ಬೇಕು ಅಷ್ಟೇ!

Sampriya
ಸೋಮವಾರ, 25 ಮಾರ್ಚ್ 2024 (14:23 IST)
photo Courtesy Instagram
ಬೆಂಗಳೂರು:  ಬೆಳ್ಳುಳ್ಳಿ ಕಬಾಬ್ ಖ್ಯಾತಿಯ ಚಂದ್ರು ಅವರು ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ.  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ 'ಸವಿರುಚಿ' ಸೀಸನ್ 3ರಲ್ಲಿ ನಿರೂಪಕಿ ಜಾಹ್ನವಿ ಅವರ ಜತೆ ಅಡುಗೆ ಮಾಡಿ ಕನ್ನಡಿಗರಿಗೆ ತೋರಿಸಲಿದ್ದಾರೆ. ಈ ಬಗ್ಗೆ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.

ಜಾಹ್ನವಿ ಈಗಾಗಲೇ ಕಲರ್ಸ್ ಕನ್ನಡದ ಹಲವು ಟಾಕ್‌ ಶೋಗಳನ್ನು ನಡೆಸಿಕೊಟ್ಟಿದ್ದಾರೆ. ಜೊತೆಗೆ 'ಗಿಚ್ಚಿ ಗಿಲಿ ಗಿಲಿ', 'ನನ್ನಮ್ಮ ಸೂಪರ್ ಸ್ಟಾರ್‌'ನಂತರ ರಿಯಾಲಿಟಿ ಶೋಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ 'ಸವಿರುಚಿ' ಶೋಗೂ ಎಂಟ್ರಿ ಕೊಟ್ಟಿದ್ದು, ಅವರ ಜೊತೆಗೆ ಚಂದ್ರು ಕೂಡ ಬಂದಿರುವುದು ವಿಶೇಷ.

ಚಂದ್ರುಗೆ ಖ್ಯಾತಿ ತಂದ ಬೆಳ್ಳುಳ್ಳಿ ಕಬಾಬ್: ಹೊಟೇಲ್ ಮಾಲೀಕರಾಗಿರುವ ಚಂದ್ರುಗೆ ಬೆಳ್ಳುಳ್ಳಿ ಕಬಾಬ್ ರೆಸಿಪಿ ತುಂಬಾನೇ ಖ್ಯಾತಿ ತಂದುಕೊಟ್ಟಿದ್ದು. ಈ ಹಿಂದೆಯೂ ಇವರು ಮಾಲಶ್ರೀ ಅವರ ಮೇಕಪ್‌ ಮ್ಯಾನ್ ಆಗಿ ಕೆಲಸ ಮಾಡಿದ್ದರು. ದೊಡ್ಮನೆ ನಂಟಿನೊಂದಿಗೆ ಹೊಟೇಲ್ ಉದ್ಯಮ ಆರಂಭಿಸಿದ್ದರು. ಸದ್ಯ ಯಶಸ್ವಿಯಾಗಿ ಇವರು ಹೊಟೇಲ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ಸವಿರುಚಿ' ಪ್ರೋಮೋ ರಿಲೀಸ್

'ಸವಿರುಚಿ' ಕಾರ್ಯಕ್ರಮದ ಕುರಿತಾಗಿ ಈಗಾಗಲೇ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿಯು ರಿಲೀಸ್ ಮಾಡಿದೆ. ಏ.9ರ ಯುಗಾದಿ ಹಬ್ಬದ ದಿನ 'ಸವಿರುಚಿ' ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಪ್ರತಿದಿನ 12 ಗಂಟೆಗೆ ಈ ಶೋ ಪ್ರಸಾರವಾಗಲಿದೆ. ಈಗಾಗಲೇ ಪ್ರೋಮೋ ಸಖತ್ ವೈರಲ್ ಆಗುತ್ತಿದೆ.

<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ನಟ ಸುದೀಪ್ ಖರೀದಿಸಿದ ಜಾಗದಲ್ಲಿ ವಿಷ್ಣು ಅಭಿಮಾನ ಸ್ಮಾರಕ ನಿರ್ಮಾಣಕ್ಕೆ ಚಾಲನೆ

ಮುಂದೂಡಿದ್ದ ಶಿವಣ್ಣ, ಉಪೇಂದ್ರ, ರಾಜ್‌ ಬಿಶೆಟ್ಟಿ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಸುಳ್ಳು ಸಾವಿನ ವದಂತಿ: ಸತ್ಯ ಹೇಳಿ ನನ್ನ ಬಾಯಿ ಒಣಗಿತು ಎಂದಾ ನಟ ರಜಾ ಮುರಾದ್‌

ಕನ್ನಡದ ಖ್ಯಾತ ನಿರೂಪಕಿ ಮದುವೆ ಡೇಟ್ ಫಿಕ್ಸ್‌, ಮದುವೆ ಎಲ್ಲಿ ಗೊತ್ತಾ

ಮುಂದಿನ ಸುದ್ದಿ
Show comments