ಕಿರುತೆರೆಗೆ ಬರ್ತಿದ್ದಾರೆ ನಟಿ ಪ್ರೇಮಾ

Krishnaveni K
ಸೋಮವಾರ, 25 ಮಾರ್ಚ್ 2024 (13:07 IST)
Photo Courtesy: Instagram
ಬೆಂಗಳೂರು: ಹಿರಿತೆರೆಯಲ್ಲಿ ಕನ್ನಡದ ಘಟಾನುಘಟಿ ಸ್ಟಾರ್ ಗಳಿಗೆ ನಾಯಕಿಯಾಗಿ ಮಿಂಚಿದ್ದ ನಟಿ ಪ್ರೇಮಾ ಈಗ ಕಿರುತೆರೆಗೆ ಬರುತ್ತಿದ್ದಾರೆ. ಅವರು ರಿಯಾಲಿಟಿ ಶೋ ಒಂದರಲ್ಲಿ ತೀರ್ಪುಗಾರರಾಗಲಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ಮಹಾನಟಿ ಎಂಬ ರಿಯಾಲಿಟಿ ಶೋ ನಡೆಯಲಿದೆ. ಈ ರಿಯಾಲಿಟಿ ಶೋನಲ್ಲಿ ಪ್ರತಿಭಾವಂತ ನಟಿಯರನ್ನು ಗುರುತಿಸಿ ಅವರಿಗೆ ವೇದಿಕೆ ಕಲ್ಪಿಸಲಾಗುತ್ತದೆ. ಇದೊಂದು ವಿಶಿಷ್ಟ ಪರಿಕಲ್ಪನೆಯೊಂದಿಗೆ ಮೂಡಿಬರುತ್ತಿರುವ ರಿಯಾಲಿಟಿ ಶೋ. ಸರಿಗಮಪ ಶೋ ಮುಗಿದ ಬಳಿಕ ಜೀ ಕನ್ನಡ ಮತ್ತೊಂದು ರಿಯಾಲಿಟಿ ಶೋ ನಡೆಸಿಕೊಡಲು ಮುಂದಾಗಿದೆ.

ಈ ರಿಯಾಲಿಟಿ ಶೋಗೆ ತೀರ್ಪುಗಾರರಾಗಿ ನಟಿ ಪ್ರೇಮಾ ಬರುತ್ತಿದ್ದಾರೆ. ಇದುವರೆಗೆ ಪ್ರೇಮಾ ಹಿರಿತೆರೆಯಲ್ಲಿ ಮಾತ್ರ ಮಿಂಚಿದ್ದರು. ಆದರೆ ಕಿರುತೆರೆಯಲ್ಲಿ ತೀರ್ಪುಗಾರರಾಗುತ್ತಿರುವುದು ಅವರಿಗೆ ಹೊಸ ಅನುಭವ. ಈಗಾಗಲೇ ಅವರ ಸಹೋದರ ಎನ್. ಅಯ್ಯಪ್ಪ ಕಿರುತೆರೆಯಲ್ಲಿ ರಿಯಾಲಿಟಿ ಶೋ, ಧಾರವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಅಕ್ಕನ ಸರದಿ.

ಒಂದು ಕಾಲದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ರಿಂದ ಹಿಡಿದು, ರವಿಚಂದ್ರನ್, ಶಿವರಾಜ್ ಕುಮಾರ್, ರಮೇಶ್ ಸೇರಿದಂತೆ ಹೆಚ್ಚಿನ ಘಟಾನುಘಟಿ ಹೀರೋಗಳಿಗೆ ಹೀರೋಯಿನ್ ಆಗಿದ್ದ ಪ್ರೇಮಾ ನಂ.1 ನಾಯಕಿಯಾಗಿ ಮಿಂಚಿದ್ದವರು. ಈಗ ಮಹಾನಟಿ ರಿಯಾಲಿಟಿ ಶೋಗೆ ಅವರನ್ನು ತೀರ್ಪುಗಾರರನ್ನಾಗಿ ಮಾಡಿರುವುದು ಸರಿಯಾದ ಆಯ್ಕೆಯಾಗಿದೆ. ಸದ್ಯಕ್ಕೆ ವಾಹಿನಿ ಅವರ ಪ್ರೋಮೋ ಶೂಟ್ ಮಾಡಿದ್ದು, ಈ ತೀರ್ಪುಗಾರರು ಯಾರು ಎಂದು ಗೆಸ್ ಮಾಡಲು ವೀಕ್ಷಕರಿಗೆ ಕೇಳಿದೆ. ಸದ್ಯದಲ್ಲೇ ಅಧಿಕೃತವಾಗಿ ಪ್ರೋಮೋ ಹೊರಬಿಡಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments