Select Your Language

Notifications

webdunia
webdunia
webdunia
webdunia

ಸೂಪರ್ ಜೋಡಿಯಲ್ಲಿ ಬೈಕ್ ರೇಸ್ ಮಜಾ ನೋಡಿ

ಸೂಪರ್ ಜೋಡಿಯಲ್ಲಿ ಬೈಕ್ ರೇಸ್ ಮಜಾ ನೋಡಿ
Bangalore , ಶುಕ್ರವಾರ, 3 ಫೆಬ್ರವರಿ 2017 (15:21 IST)
ಬರೀ ದಿಲ್ ಇದ್ದರೆ ಸಾಲದು ಜೊತೆಗೆ ಧಮ್ ಬೇಕು ಅನ್ನೋ ಹಾಗೆ ಸಿದ್ದವಾಗಿದೆ ಸೂಪರ್ ಜೋಡಿ ಅಖಾಡ. ಈ ವಾರ ಜೋಡಿಗಳಿಗೆ ಬೈಕ್ ರೇಸ್ ಸವಾಲ್ ಎದುರಾಯ್ತು. ಜೋಡಿಯಾಗಿ ಜೀವನದ ಏರು ಪೇರುಗಳನ್ನ ನಿಭಾಯಿಸುತ್ತಿದ್ದವರು ಜೋಡಿಯಾಗಿ ಬೈಕ್ ರೇಸ್ ಸವಾಲ್‍ನ ಹೇಗೆ ನಿಭಾಯಿಸಿದರು ಎಂಬುದು ಕೂತುಹಲವಾಗಿದೆ.
 
ಬರಿ ನೈಸ್ ರೋಡಲ್ಲಿ ಜಾಲಿ ರೈಡ್ ಮಾಡುತ್ತಿದ್ದವರು ಟ್ವಿಸ್ಟ್‌ಗಳಿರುವ ಕೆಸರುರಸ್ತೆಯಲ್ಲಿ ಜೊತೆ ಕನ್‍ಫ್ಯೂಸ್ ಆಗಿ ನಿಟ್ಟುಸಿರು ಬಿಡುತ್ತಾ ಮಾಡಿಕೊಂಡ ಎಡವಟ್ಟುಗಳೆ  ಪಕ್ಕ ಎಂಟರ್‌ಟೇನೆಂಟ್, ಜೋಡಿಗಳಾಗಿ ರೇಸ್‍ಗಿಳಿದು ಪೈಪೋಟಿ ಭರ್ಜರಿಯಾಗೆ ಕೊಟ್ರು, ಒಟ್ಟಿನಲ್ಲಿ ಥ್ರಿಲ್ಲಿಂಗ್ ಜೊತೆ ಸಖತ್  ಮನೋರಂಜನಕಾರಿಯಾಗಿದೆ ಈ ವಾರದ ಸಂಚಿಕೆಗಳು.
 
ಹೀಗೆ ಇದರ ಜೊತೆಗೆ ಇನ್ನೊಂದು ಟಾಸ್ಕ್‌ಗಳನ್ನು ನೀಡಲಾಗಿತ್ತು ಅದು ಮದುವೆ ಪರೀಕ್ಷೆ ಟಾಸ್ಕ್. ಮದುವೆಯ ಸಾಂಪ್ರದಾಯಿಕ ಶಾಸ್ತ್ರಪದ್ಧತಿ ಮಹತ್ವಗಳ ಬಗ್ಗೆ ಚರ್ಚಿಸಲಾಯಿತು. ಈ ಎಲ್ಲಾ ವಿಶೇಷತೆ ತಿಳಿಸಿಕೊಡಲು ಸ್ಟಾರ್ ಸುವರ್ಣದ ಪ್ರಖ್ಯಾತ ಜ್ಯೋತಿಷಿ ಡಾ.ಗೋಪಾಲಕೃಷ್ಣ ಶರ್ಮ ಗುರೂಜಿಯವರು ಸೂಕ್ತವಾಗಿ ಪರಿಶೀಲಿಸಿ ಅರ್ಥೈಸಿ ಮನವರಿಕೆ ಮಾಡಿಕೊಟ್ಟರು. 
 
ಕೆಲವು ಜೋಡಿಗಳು ಮದುವೆಯ ಸಂದರ್ಭದ ರಿಂಗ್ ಆಟ ಆಡಿದರೆ ಇನ್ ಕೆಲವರು ಹೂ ಆಟ ಆಡಿ ಎಲ್ಲರನ್ನು ರಂಜಿಸಿದ್ದಾರೆ. ಮದುವೆಯ ವಾತಾರಣದ ಸಂದರ್ಭಕ್ಕೆ ಮತ್ತಷ್ಟು ಮೆರಗು ನೀಡಿದ್ದು ಇದೇ ಸೋಮವಾರದಿಂದ ಪ್ರಾರಂಭವಾಗುವ “ತ್ರಿವೇಣಿ ಸಂಗಮ”ಧಾರವಾಹಿಯ ತಂಡದವರು. ಸೌಂದರ್ಯವತಿ, ಸಿನಿಮಾ ಲೋಕದ ತಾರೆ ಅನುಪ್ರಭಾಕರ್ ಮುಖರ್ಜಿ ಮತ್ತು ರಾಜೇಶ್ ನಟರಂಗ. 
 
ಈ ಜೋಡಿಗಳು ಸಂಭ್ರಮದ ಹಾಡಿನ ಮೂಲಕ ವೇದಿಕೆಗೆ ಎಂಟ್ರಿಕೊಟ್ಟು ವಧು ವರರಿಗೆ ಹಾರೈಸಿದರು. ಈ ಎಲ್ಲಾ ವಿಶೇಷತೆಗಳ ಜೊತೆ ಒಂದು ಎಲಿಮಿನೇಷನ್ ಕೂಡಾ ಈವಾರ ನಡೆಯುತ್ತದೆ. ಹಾಗಾದರೆ ಹೋರ ಹೋಗುವÀ ಜೋಡಿ ಯಾವುದು? ಎಂಬುದನ್ನು ಕಾದು ನೋಡಬೇಕಾಗಿದೆ. ಡಬಲ್ ಧಮಾಕ ಡಬಲ್ ಎಂಟರ್‌ಟೇನ್‍ಮೆಂಟ್‍ನ ಸೂಪರ್ ಜೋಡಿ ಸೀಸನ್ 2 ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ  ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಲ್ಮಾನ್ ಖಾನ್ ಚಿತ್ರದಲ್ಲಿ ಶಾರುಖ್ ಖಾನ್ ಮ್ಯಾಜಿಕ್