Select Your Language

Notifications

webdunia
webdunia
webdunia
webdunia

ಸಲ್ಮಾನ್ ಖಾನ್ ಚಿತ್ರದಲ್ಲಿ ಶಾರುಖ್ ಖಾನ್ ಮ್ಯಾಜಿಕ್

ಸಲ್ಮಾನ್ ಖಾನ್ ಚಿತ್ರದಲ್ಲಿ ಶಾರುಖ್ ಖಾನ್ ಮ್ಯಾಜಿಕ್
Mumbai , ಶುಕ್ರವಾರ, 3 ಫೆಬ್ರವರಿ 2017 (14:50 IST)
ಬಾಲಿವುಡ್‌ನ ಖಾನ್‍ದ್ವಯರು ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡು ಬಹಳಷ್ಟು ಸಮಯವಾಗಿದೆ. ಅವರು ಬೇರಾರು ಅಲ್ಲ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್. ಇವರಿಬ್ಬರನ್ನೂ ಒಟ್ಟಿಗೆ ಬೆಳ್ಳಿಪರದೆಗೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಕಬೀರ್ ಖಾನ್.
 
ಸಲ್ಮನ್ ಜತೆಗೆ ಭಜರಂಗಿ ಬಾಯ್‌ಜಾನ್ ತೆಗೆದ ಕಬೀರ್ ಈಗ ಟ್ಯೂಬ್‌ಲೈಟ್ ತೆರೆಗೆ ತರುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರದಲ್ಲಿ ಶಾರುಖ್ ಪಾತ್ರ ಹೇಗಿತ್ತದೆ ಎಂಬ ಬಗ್ಗೆ ಬಾಲಿವುಡ್‌ನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ.
 
ಟ್ಯೂಬ್‌ಲೈಟ್ ನಲ್ಲಿ ಶಾರುಖ್ ಮ್ಯಾಜಿಷಿಯನ್ ಆಗಿ ಕಾಣಿಸುತ್ತಿದ್ದಾರಂತೆ. 1962ರ ಚೀನಾ-ಭಾರತ ಯುದ್ಧದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ತೆರೆಗೆ ತರಲಾಗುತ್ತಿದೆ. ವಿಶೇಷ ಎಂದರೆ ಸಲ್ಮಾನ್ ಖಾನ್ ಬುದ್ಧಿಮಾಂದ್ಯನಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಕರಣ್ ಅರ್ಜುನ್ ಚಿತ್ರದಲ್ಲಿ ಈ ಜೋಡಿ ಅಭಿನಯಿಸಿತ್ತು. ಕುಚ್ ಕುಚ್ ಹೋತಾ ಹೈ ಚಿತ್ರದಲ್ಲಿ ಸಲ್ಲು ಅತಿಥಿ ಪಾತ್ರ ಪೋಷಿಸಿದ್ದರು. ಓಂ ಶಾಂತಿ ಓಂ ಚಿತ್ರದ ಹಾಡೊಂದರಲ್ಲಿ ಸಲ್ಲು ಹೆಜ್ಜೆ ಹಾಕಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಸಂಗೀತ ನಿರ್ದೇಶಕನ ಸಂಭಾವನೆ ಎಷ್ಟು ಗೊತ್ತಾ?