Webdunia - Bharat's app for daily news and videos

Install App

ಬಿಗ್ ಬಾಸ್ ಕನ್ನಡ: ಒಂದು ಸೇಬಿಗಾಗಿ ಮನೆಯೇ ಇಬ್ಬಾಗವಾಯಿತು!

Webdunia
ಶುಕ್ರವಾರ, 25 ಅಕ್ಟೋಬರ್ 2019 (10:39 IST)
ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋನಲ್ಲಿ ನಿನ್ನೆಯಿಡೀ ಒಂದು ಸೇಬಿಗಾಗಿ ಕಿತ್ತಾಟ ನಡೆದಿದೆ.

 

ಅಡುಗೆ ಮನೆಯ ಇನ್ ಚಾರ್ಜ್ ತೆಗೆದುಕೊಂಡಿರುವ ಸುಜಾತ ಅವರ ಪರ್ಮಿಷನ್ ತೆಗೆದುಕೊಳ್ಳದೇ ಸಹಾಯಕರಾಗಿರುವ ಚಂದನ್ ಆಚಾರ್ ಬಳಿ ಕೇಳಿ ಚೈತ್ರಾ ಕೋಟೂರು ಆಪಲ್ ಸೇವಿಸಿದ್ದು ಮನೆಯಲ್ಲಿ ಕಿತ್ತಾಟಕ್ಕೆ ಕಾರಣವಾಯಿತು. ಬೆಳಿಗ್ಗೆಯಿಂದಲೂ ಇದೇ ವಿಚಾರವಾಗಿ ಕಿರಿ ಕಿರಿ ಆರಂಭವಾಗಿತ್ತು.

ಆದರೆ ಸುಜಾತಗೆ ಈ ವಿಚಾರ ಗೊತ್ತೇ ಇರಲಿಲ್ಲ. ಹೀಗಾಗಿ ಕಾಮನ್ ಸೆನ್ಸ್ ಇಲ್ವಾ? ಯಾಕೆ ಒಪ್ಪಿಗೆ ಕೇಳದೇ ಬೇಕಾಗಿದ್ದನ್ನು ತೆಗೆದು ತಿಂತಾ ಇದ್ದೀರಾ? ಇನ್ನು ಮುಂದೆ ಯಾರೂ ಒಪ್ಪಿಗೆಯಿಲ್ಲದೇ ಅಡುಗೆ ಮನೆ ಪ್ರವೇಶಿಸಬಾರದು ಎಂದರು. ಈ ವೇಳೆ ಚಂದನ್ ನಾನು ಸುಜಾತ ಬಳಿ ಕೇಳಿ ತಿಂದೆ ಎಂದಿದ್ದೆ ಎಂದರು. ಜತೆಗೆ ಚಂದನ್ ಡೀಸೆನ್ಸಿ ಇಲ್ವಾ ಎಂದಿದ್ದು ಚೈತ್ರಾ ಸಿಟ್ಟಿಗೆ ಕಾರಣವಾಯಿತು.

ತೀರಾ ಕೂಗಾಡಿದ ಚೈತ್ರಾ ಬಳಿಕ ಅತ್ತಿದ್ದೂ ಆಯ್ತು, ಮನೆಯವರೆಲ್ಲಾ ಸಮಾಧಾನ ಮಾಡುವ ಸೀನ್ ಕೂಡಾ ಆಯ್ತು. ಹಾಗಿದ್ದರೂ ಯಾಕೋ ದಿನವಿಡೀ ಇದೇ ವಿಚಾರವೇ ಬಿಗ್ ಬಾಸ್ ಮನೆಯಲ್ಲಿ ಸುತ್ತಾಡುತ್ತಾ ಕೆಲವರು ಚಂದನ್ ಪರ, ಇನ್ನು ಕೆಲವರು ಚೈತ್ರಾ ಪರ ಮಾತನಾಡುತ್ತಿದ್ದುದು ಕಂಡುಬಂತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಆಂಡ್ ಗ್ಯಾಂಗ್ ತೀರ್ಪು ಮತ್ತೆ ಮುಂದೂಡಿಕೆ

ಬಿಕ್ಲು ಶಿವು ಮರ್ಡರ್ ಕೇಸ್ ಆರೋಪಿಗಿದೆಯಾ ಸ್ಯಾಂಡಲ್ ವುಡ್ ತಾರೆಯರ ನಂಟು

ದರ್ಶನ್ ಜಾಮೀನು ತೀರ್ಪು ಇಂದು: ಸುಪ್ರೀಂಕೋರ್ಟ್ ನಲ್ಲಿ ದಾಸನ ಭವಿಷ್ಯ ಏನಾಗುತ್ತದೆ

ಚಿತ್ರೀಕರಣದ ವೇಳೆ ಶಿಲ್ಪಾ ಶಿರೋಡ್ಕರ್ ಗುಂಡಿಕ್ಕಿ ಸಾವು: ಪ್ರಚಾರದ ಗಿಮಿಕ್‌ಗೆ ಮನೆಯವರೆಲ್ಲರೂ ಶಾಕ್ ಎಂದ ನಟಿ

ದೊಡ್ಡ ಅಪಘಾತದಿಂದ ಜಸ್ಟ್‌ ಎಸ್ಕೇಪ್ ಆದ ನಟ ಅಜಿತ್‌ರ ನಂತರದ ನಡೆಗೆ ಫ್ಯಾನ್ಸ್ ಫುಲ್ ಶಾಕ್‌

ಮುಂದಿನ ಸುದ್ದಿ
Show comments