ಬಿಗ್ ಬಾಸ್ ಕನ್ನಡ: ಸಂಯುಕ್ತಾ ಕಿರಿಕ್ ಗೆ ಬೇಸತ್ತ ಅಭಿಮಾನಿಗಳು ಏನೆಂದ್ರು ಗೊತ್ತಾ?

Webdunia
ಶನಿವಾರ, 16 ಡಿಸೆಂಬರ್ 2017 (09:41 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ಹೋಗಿದ್ದು ಒಂದೇ ವಾರಕ್ಕೆ. ಅದೂ ಸೆಲೆಬ್ರಿಟಿಯಾಗಿ. ಹಾಗಿದ್ದರೂ ಸಂಯುಕ್ತಾರನ್ನು ಜನ ಅದ್ಯಾವ ಪರಿ ಜಾಡಿಸುತ್ತಿದ್ದಾರೆಂದರೆ ಕಿರಿಕ್ ನಟಿಗೆ ಜಗಳಗಂಟಿ ಎಂದು ಬಿರುದು ಕೊಟ್ಟಿದ್ದಾರೆ.
 

ಪ್ರಾಣ ಗೆಳತಿ ಲಾಸ್ಯ ಜತೆ ಬಿಗ್ ಬಾಸ್ ಮನೆಯೊಳಗೆ ಪ್ರವೇಶಿಸಿದ ಸಂಯುಕ್ತಾ ಮನೆಯವರ ಜತೆ ಕಿರಿಕ್ ಮಾಡಿಕೊಂಡಿದ್ದಲ್ಲದೆ, ಲಾಸ್ಯ ಜತೆಗೇ ಕಿತ್ತಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಂಯುಕ್ತಾಳನ್ನು ಸಹಿಸಲಾಗುತ್ತಿಲ್ಲ. ಫೂಟೇಜ್ ಗಾಗಿ ಸ್ನೇಹಿತೆ ಜತೆಗೇ ಕಿತ್ತಾಡುತ್ತಿದ್ದಾಳೆ ಎಂದು ಕೆಲವರು ಹೇಳಿದರೆ ಇನ್ನು ಕೆಲವರು, ತಾನು ದೊಡ್ಡ ಬಾಲಿವುಡ್ ನಟಿ ಎಂಬಂತೆ ಮೆರೆಯುತ್ತಿದ್ದಾಳೆ. ಮೊದಲು ಈಕೆಯನ್ನು ಹೊರಗಟ್ಟಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ನಿವೇದಿತಾ, ಜಯಶ್ರೀನಿವಾಸನ್ ವೃತ್ತಿ, ವ್ಯಕ್ತಿತ್ವದ ಬಗ್ಗೆ ಕಾಮೆಂಟ್ ಮಾಡುವ ಸಂಯುಕ್ತಾ ಗುಣ ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಅಷ್ಟೂ ಸಾಲದೆಂಬಂತೆ ಆಕೆಯೇ ತಪ್ಪು ಮಾಡಿದಾಗ ಗೆಳತಿ ಲಾಸ್ಯ ಅದನ್ನು ತಿಳಿಸಿ ಹೇಳಲು ಹೋದರೆ ಆಕೆಯ ಜತೆಗೇ ಜಗಳವಾಡುವುದನ್ನು ನೋಡಿ ವೀಕ್ಷಕರು ಬೇಸತ್ತಿದ್ದಾರೆ. ಮನೆಯೊಳಗಿರುವವರು ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಬಿಗ್ ಬಾಸ್ ಪ್ರವೇಶಿಸಲಿರುವ 14 ಸ್ಪರ್ಧಿಗಳು ಇವರೇ

ಕಾಂತಾರ ಚಾಪ್ಟರ್ 1 ಟಿಕೆಟ್ ಮೊದಲ ನಾಲ್ಕು ದಿನ ಸಿಗೋದೇ ಡೌಟು

ಕಾಂತಾರ ಚಾಪ್ಟರ್ 1 ಪ್ರಮೋಷನ್ ಇಂದು ಶುರು: ಹೈದರಾಬಾದ್ ನಲ್ಲಿ ಜ್ಯೂ ಎನ್ ಟಿಆರ್ ಸಾಥ್

ಸಿನಿಮಾ ಬದುಕಿನಲ್ಲಿ ವಿಭಿನ್ನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಶ್ರೀಮುರುಳಿ

₹60ಕೋಟಿ ವಂಚನೆ ಪ್ರಕರಣ: ನಾನು ಯಾವುದೇ ತಪ್ಪು ಮಾಡಿಲ್ಲ ಎಂದ ಶಿಲ್ಪಾ ಶೆಟ್ಟಿ ಪತಿ

ಮುಂದಿನ ಸುದ್ದಿ
Show comments