Publish Date: Thu, 03 Nov 2016 (13:24 IST)
Updated Date: Thu, 03 Nov 2016 (13:30 IST)
ಬೆಂಗಳೂರು: ಕಲರ್ಸ್ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಮನೆಯಲ್ಲಿ ಯಾರೂ ಟಾಸ್ಕ್ ಸರಿಯಾಗಿ ನಿಭಾಯಿಸಿಲ್ಲ ಎಂದು ಕಳೆದ ವಾರವೇ ಬಿಗ್ ಬಾಸ್ ಹೇಳಿದ್ದರು. ಈ ವಾರವೂ ಅದೇ ರಾಗ, ಅದೇ ಹಾಡು.
ಹೀಗಾಗಿ ಲಕ್ಷುರಿ ಬಜೆಟ್ ಟಾಸ್ಕ್ ಅರ್ಧಕ್ಕೆ ನಿಲ್ಲಿಸಲು ಬಿಗ್ ಬಾಸ್ ಮನೆಯ ಸದಸ್ಯರಿಗೆ ಸೂಚಿಸಿದ್ದಾರೆ. ಮನೆಯ ಸದಸ್ಯರಿಗೆ ರಾಣಿ-ಮಹಾರಾಣಿ ಟಾಸ್ಕ್ ನೀಡಲಾಗಿತ್ತು. ಅದರಂತೆ ಮಾಳವಿಕಾ ಮಹಾರಾಣಿ ಮತ್ತು ಸಂಜನಾ ಯುವರಾಣಿ, ಮೋಹನ್ ಮಂತ್ರಿ, ಕೀರ್ತಿ ಕುಮಾರ್ ಸೇನಾಪತಿ ಹಾಗೂ ಉಳಿದವರು ಸೇವಕರ ಪಾತ್ರ ನಿಭಾಯಿಸಬೇಕಿತ್ತು.
ಆದರೆ ಕೊಟ್ಟ ಟಾಸ್ಕ್ ಮಾಡುವುದನ್ನು ಬಿಟ್ಟು, ತಮ್ಮದೇ ಲೋಕದಲ್ಲಿದ್ದ, ಕಚ್ಚಾಡಿಕೊಂಡಿದ್ದ ಸದಸ್ಯರ ಮೇಲೆ ಬಿಗ್ ಬಾಸ್ ಸಿಟ್ಟಾಗಿದ್ದಾರೆ. ಅರ್ಧಕ್ಕೇ ಟಾಸ್ಕ್ ನಿಲ್ಲಿಸಿ ಎಂದು ಸೂಚಿಸಿದ ನಂತರ ಎಚ್ಚೆತ್ತುಕೊಂಡ ಮನೆಯ ಸದಸ್ಯರು ಮನವಿ ಮಾಡಿಕೊಂಡರೂ ಬಿಗ್ ಬಾಸ್ ಕರಗಲಿಲ್ಲ. ಮುಂದಿನ ವಾರದ ರೇಷನ್ ಕೂಡಾ ಅರ್ಧದಷ್ಟು ಕಡಿತ ಮಾಡಿದ ಮೇಲೆ ಮನೆಯ ಸದಸ್ಯರು ಒಬ್ಬರ ಮೇಲೊಬ್ಬರು ಆರೋಪ ಮಾಡುವುದರಲ್ಲೇ ತಲ್ಲೀನರಾಗಿದ್ದಾರೆ.
ಈ ಶನಿವಾರ ಮತ್ತೆ ಕಿಚ್ಚ ಸುದೀಪ್ ಕೈಯಲ್ಲಿ ಮನೆಯ ಸದಸ್ಯರ ಬೇಜವಾಬ್ದಾರಿ ವರ್ತನೆಗೆ ಬೈಸಿಕೊಳ್ಳುವ ಪ್ರಸಂಗ ಎದುರಾರೂ ಅಚ್ಚರಿಯಿಲ್ಲ. ಯಾಕೆಂದರೆ ಬಿಗ್ ಬಾಸ್ ಟಾಸ್ಕ್ ಗಳನ್ನು ನೀಡುವುದೇ ವೀಕ್ಷಕರ ಮನರಂಜನೆಗಾಗಿ. ಮನರಂಜನೆಯೇ ಇಲ್ಲದಿದ್ದ ಮೇಲೆ ಬಿಗ್ ಬಾಸ್ ಯಾರು ನೋಡುತ್ತಾರೆ?
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ