Publish Date: Thu, 03 Nov 2016 (13:05 IST)
Updated Date: Thu, 03 Nov 2016 (16:55 IST)
ಮುಂಬೈ: ಸೂಪರ್ ಸ್ಟಾರ್ ರಜನೀಕಾಂತ್ ಮತ್ತು ಅಕ್ಷಯ್ ಕುಮಾರ್ ಜತೆಯಾಗಿ ನಟಿಸಿದ ಶಂಕರ್ ನಿರ್ದೇಶನದ “2.0” ಚಿತ್ರದ ಪಸ್ಟ್ ಲುಕ್ ನವಂಬರ್ 20 ಕ್ಕೆ ಮುಂಬೈನಲ್ಲಿ ಬಿಡುಗಡೆಯಾಗಲಿದೆ.
ಅಂದಾಜು 350 ಕೋಟಿ ವೆಚ್ಚದ ಬಹುನಿರೀಕ್ಷಿತ ಚಿತ್ರದ ಪಸ್ಟ್ ಲುಕ್ ಬಿಡುಗಡೆ ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ನಿರ್ಮಾಪಕರು ಯೋಜನೆ ರೂಪಿಸುತ್ತಿದ್ದಾರಂತೆ. ಈ ಚಿತ್ರ ಎಂಥಿರಾನ್ ಚಿತ್ರದ ಮುಂದುವರಿದ ಭಾಗವಾಗಿದೆ.
ಕಾರ್ಯಕ್ರಮಕ್ಕೆ ದೇಶ ವಿದೇಶದ ಸಿನಿ ಗಣ್ಯರನ್ನು ಆಹ್ವಾನಿಸುವ ಯೋಜನೆಯಿದೆಯಂತೆ. ಅಲ್ಲದೆ, ಈ ಚಿತ್ರಕ್ಕಾಗಿ ಬಾಹುಬಲಿ ಚಿತ್ರದಲ್ಲಿ ಪಾಲ್ಗೊಂಡಿದ್ದ ತಂತ್ರಜ್ಞರೂ ಕೆಲಸ ಮಾಡುತ್ತಿದ್ದಾರೆ. ಇದು ಭಾರತೀಯ ಸಿನಿಮಾ ಇತಿಹಾಸದಲ್ಲೇ ವಿಶೇಷ ಸಿನಿಮಾವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ