Publish Date: Wed, 26 Oct 2016 (11:18 IST)
Updated Date: Wed, 26 Oct 2016 (11:25 IST)
ಬೆಂಗಳೂರು: ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋ ಬಿಗ್ ಬಾಸ್ ನಲ್ಲಿ ಮತ್ತೆ ಕಿರಿಕ್ ಪ್ರಥಮ್ ಕಿರಿಕ್ ಮಾಡಿಕೊಂಡಿದ್ದಾರೆ.
ಕಳೆದ ವಾರ ಇವರ ಕಿರಿ ಕಿರಿಗೆ ಇಡೀ ಮನೆಯವರೇ ತಿರುಗಿ ಬಿದ್ದಿದ್ದರು. ಬಿಗ್ ಬಾಸ್ ಮನೆಯಲ್ಲೇ ಕಾದಾಟ ತಾರಕಕ್ಕೇರಿತ್ತು. ನಂತರ ಇದು ಕಿಚ್ಚ ಸುದೀಪ್ ಜತೆ ನಡೆಸುವ ವಾರದ ಕತೆ ಸಂವಾದದಲ್ಲಿ ಪ್ರಸ್ತಾಪವಾಗಿ ಸುದೀಪ್ ಎಲ್ಲರಿಗೂ ಬುದ್ಧಿ ಮಾತು ಹೇಳಿದ್ದರು.
ಇದೀಗ ಮತ್ತೆ ಪ್ರಥಮ್ ಬಿಗ್ ಬಾಸ್ ಮನೆಯ ಈ ವಾರದ ನಾಯಕಿ ಕಾವ್ಯಾ ಶಾಸ್ತ್ರಿ ಜತೆ ಕಿರಿಕ್ ಮಾಡಿಕೊಂಡಿದ್ದಾರೆ. ಮತ್ತೆ ಅವರಿಬ್ಬರ ನಡುವೆ ವಾಗ್ಯುದ್ಧ ನಡೆದಿದೆ. ಕೊನೆಯಲ್ಲಿ ನಾಯಕಿ ಕಾವ್ಯ ಬಿಗ್ ಬಾಸ್ ನೀಡುವ ಟಾಸ್ಕ್ ಮಾಡಲು ಬಿಡುವುದಿಲ್ಲ ಎಂದು ಆವಾಜ್ ಹಾಕುವವರೆಗೆ ಮುಂದುವರಿದಿದೆ.
ಇವರ ಕಾದಾಟ ನೋಡಲು ಬಯಸುವವರು ಇಂದಿನ ಬಿಗ್ ಬಾಸ್ ಸಂಚಿಕೆ ನೋಡಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ