Select Your Language

Notifications

webdunia
webdunia
webdunia
webdunia

ಸಿನಿಮಾ ಮಾಡುವುದು ವ್ಯವಹಾರದಂತಾಗಿದೆ ಎಂದ ಜಯಾ

ಸಿನಿಮಾ ಮಾಡುವುದು ವ್ಯವಹಾರದಂತಾಗಿದೆ ಎಂದ ಜಯಾ
Mumbai , ಬುಧವಾರ, 26 ಅಕ್ಟೋಬರ್ 2016 (10:15 IST)
ಮುಂಬೈ: ಇಂದಿನ ಕಾಲದಲ್ಲಿ ಸಿನಿಮಾ ಮಾಡುವುದು ಎಂದರೆ ವ್ಯವಹಾರ ನಡೆಸಿದಂತೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಪತ್ನಿ ಜಯಾ ಬಚ್ಚನ್ ಅಭಿಪ್ರಾಯಪಟ್ಟಿದ್ದಾರೆ.

ಹಿಂದೆ ತನ್ನ ಕಾಲದಲ್ಲಿ ಸಿನಿಮಾ ಮಾಡುತ್ತಿದ್ದವರು ಪ್ರಾಮಾಣಿಕತೆಯಿಂದ, ಅದರ ಮೇಲಿನ ಪ್ರೀತಿಯಿಂದ ಸಿನಿಮಾ ಮಾಡುತ್ತಿದ್ದರು. ಆದರೆ ಈ ದಿನಗಳಲ್ಲಿ ಅದು ಕಾಣುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಹಿಂದಿನವರ ಸಿನಿಮಾ ಮಾಡಬೇಕೆಂಬ ಬಯಕೆ ಉತ್ತಮ ಸಿನಿಮಾಗಳನ್ನು ಹೊರ ತರುತ್ತಿತ್ತು. ಆದರೆ ಇಂದಿನವರಿಗೆ ದುಡ್ಡೇ ದೊಡ್ಡದು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಇಂದಿಗೂ ಅಂತಹ ಉತ್ತಮ ಉದ್ದೇಶ ಇಟ್ಟುಕೊಂಡು ಸಿನಿಮಾ ಮಾಡಬಹುದು ಎಂದು ಅವರು ಹೇಳಿದ್ದಾರೆ.

ಮುಂಬೈಯಲ್ಲಿ ನಡೆದ ಮಾಮಿ ಚಲನಚಿತ್ರೋತ್ವದ ಚರ್ಚಾ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಜಗ್ಗೇಶ್ ಹೊಸ ಚಿತ್ರದ ಹೆಸರು ಮೇಲ್ಕೋಟೆ ಮಂಜ