BBK11: ಫಸ್ಟ್ ನೈಟ್ ನಲ್ಲಿ ಏನಾಗಿತ್ತು ಎಂದು ಅನುಭವ ಹೇಳಿದ ಧನರಾಜ್ ಆಚಾರ್

Krishnaveni K
ಶನಿವಾರ, 16 ನವೆಂಬರ್ 2024 (11:47 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಸ್ಪರ್ಧಿಯಾಗಿರುವ ಧನರಾಜ್ ಆಚಾರ್ ನಿನ್ನೆಯ ಎಪಿಸೋಡ್ ನಲ್ಲಿ ತಮ್ಮ ಫಸ್ಟ್ ನೈಟ್ ಕತೆ ಹೇಳಿದ್ದು ಮನೆಯವರೆಲ್ಲಾ ಕಾಲೆಳೆದಿದ್ದಾರೆ.

ನಿನ್ನೆಯ ಎಪಿಸೋಡ್ ನಲ್ಲಿ ಮನೆಗೆ ಅತಿಥಿಗಳಾಗಿ ಬಂದಿದ್ದ ರಾಮಚಾರಿ-ಚಾರುಲತಾ ಜೋಡಿ ಮುಂದೆ ಎಲ್ಲಾ ಜೋಡಿ ಸ್ಪರ್ಧಿಗಳು ಡ್ಯಾನ್ಸ್ ಮಾಡುವ ಟಾಸ್ಕ್ ಇತ್ತು. ಅದರಂತೆ ಭವ್ಯಾ ಗೌಡ ಮತ್ತು ತ್ರಿವಿಕ್ರಂ ಜೋಡಿ ಶೃಂಗಾರದ ಹೊಂಗೇ ಮರ ಹಾಡಿಗೆ ಫಸ್ಟ್ ನೈಟ್ ದೃಶ್ಯದ ಡ್ಯಾನ್ಸ್ ಮಾಡಿದ್ದರು.

ಈ ಟಾಸ್ಕ್ ಮುಗಿದ ಬಳಿಕ ಮನೆಯವರೆಲ್ಲಾ ಇಬ್ಬರ ಕಾಲೆಳೆದಿದ್ದಾರೆ. ಟಾಸ್ಕ್ ಎಲ್ಲಾ ಮುಗಿದು ಲಾನ್ ಏರಿಯಾದಲ್ಲಿ ಕುಳಿತುಕೊಂಡಿದ್ದಾಗ ಧನರಾಜ್ ತಮ್ಮ ಫಸ್ಟ್ ನೈಟ್ ಕತೆ ಹೇಳಿದ್ದಾರೆ. ನಮ್ಮ ಫಸ್ಟ್ ನೈಟ್ ನಲ್ಲಿ ನಮಗೆ ಎಷ್ಟು ತೊಂದರೆ ಕೊಟ್ಟಿದ್ದರು ಗೊತ್ತಾ ಎಂದು ಬಿಚ್ಚಿಟ್ಟಿದ್ದಾರೆ.

ಫಸ್ಟ್ ನೈಟ್ ದಿನ ನಮ್ಮ ರೂಂ ಬಾಗಿಲಿಗೆ ಬೋಲ್ಡ್ ಇರಲಿಲ್ಲ, ಕಿಟಿಕಿ ಕ್ಲೋಸ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಫ್ಯಾನ್ ಆನ್ ಆಗಿದ್ದರೂ ಮೂರೂ ರೆಕ್ಕೆ ಕಳಚಿಟ್ಟಿದ್ದರು. ಬಲೂನ್ ನಲ್ಲಿ ನೀರು ತುಂಬಿಸಿಟ್ಟಿದ್ದರು. ಊದುಬತ್ತಿ ಬ್ಲಾಸ್ಟ್ ಆಗುವ ಹಾಗೆ ಫಿಕ್ಸ್ ಮಾಡಿದ್ದರು. ಅಬ್ಬಾ.. ನನ್ನ ಫಸ್ಟ್ ನೈಟ್ ಗೆ ನಂಗೆ ಇನ್ನಿಲ್ಲದ ಹಾಗೆ ಕಾಟ ಕೊಟ್ಟಿದ್ರು. ಅದೂ ನಮ್ಮ ಫಸ್ಟ್ ನೈಟ್ ಗೆ ಮುಹೂರ್ತ ಇದ್ದಿದ್ದು ಎಂದು ಧನರಾಜ್ ಕತೆ ಹೇಳುತ್ತಿದ್ದರೆ ಮನೆಯವರೆಲ್ಲಾ ಹೊಟ್ಟೆ ಹುಣ್ಣಾಗುವ ಹಾಗೆ ನಕ್ಕಿದ್ದಾರೆ. ಇನ್ನು ಮುಹೂರ್ತದ ವಿಚಾರ ಬಂದಾಗ ಅದಕ್ಕೂ ಮುಹೂರ್ತ ಇರುತ್ತಾ ಎಂದು ಗೌತಮಿ ಕೇಳಿದ್ದಾರೆ. ಅದಕ್ಕೆ ಧನರಾಜ್ ನಿಮ್ಮದು ಯಾವಾಗ ಆಗಿದ್ದು, ಅಂದರೆ ಫಸ್ಟ್ ನೈಟ್ ಯಾವಾಗ ಆಗಿದ್ದು ಮುಹೂರ್ತ ಇರಲಿಲ್ವಾ ಎಂದಿದ್ದಾರೆ. ಅಯ್ಯೋ.. ನಮ್ಮದರಲ್ಲಿ ಮುಹೂರ್ತ ಎಲ್ಲಾ ಏನೂ ಇಲ್ಲ ಎಂದಿದ್ದಾರೆ. ಧನರಾಜ್ ಫಸ್ಟ್ ನೈಟ್ ಮಾತುಕತೆ ಉಳಿದ ಸ್ಪರ್ಧಿಗಳ ಮುಖದಲ್ಲಿ ನಗು ತರಿಸಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ಪ್ರದೋಷ್‌ಗೆ 5 ದಿನ ಜಾಮೀನು , ಯಾಕೆ ಗೊತ್ತಾ

ಮುಂದಿನ ಸುದ್ದಿ
Show comments