BBK10: ವಾರದ ಮಧ್ಯೆಯೇ ಎಲಿಮಿನೇಟ್ ಆದ ತನಿಷಾ

Krishnaveni K
ಗುರುವಾರ, 18 ಜನವರಿ 2024 (09:14 IST)
ಬೆಂಗಳೂರು: ಬಿಗ್ ಬಾಸ್ ಸೀಸನ್ 10 ರಲ್ಲಿ ವಾರದ ಮಧ್ಯೆಯೇ ತನಿಷಾ ಕುಪ್ಪಂಡ ಎಲಿಮಿನೇಟ್ ಆಗಿ ಮನೆಯಿಂದ ಹೊರಹೋಗಿದ್ದಾರೆ.

ಬಿಗ್ ಬಾಸ್ ಸೀಸನ್ 10 ಅಂತಿಮ ಹಂತಕ್ಕೆ ಬಂದಿದ್ದು, ಈ ವಾರ ಮಧ‍್ಯರಾತ್ರಿ ಅಚ್ಚರಿಯ ಎಲಿಮಿನೇಷನ್ ಪ್ರಕ್ರಿಯೆ ನಡೆಸಲಾಗಿದೆ. ಎಲ್ಲರನ್ನೂ ಗಾರ್ಡನ್ ಏರಿಯಾಗೆ ಕರೆತಂದು ಸಾಲಾಗಿ ನಿಲ್ಲಲು ಸೂಚಿಸಲಾಯಿತು.

ಬಳಿಕ ಬಿಗ್ ಬಾಸ್ ಇದೀಗ ಬಿಗ್ ಬಾಸ್ ಸೂಚಿಸುವ ಸ್ಪರ್ಧಿ ಮನೆಯಿಂದ ಹೊರಹೋಗಬೇಕು ಎಂದು ಆದೇಶಿಸಿದರು. ಬಿಗ್ ಬಾಸ್ ಆದೇಶ ಕೇಳಿ ಮನೆಯವರೆಲ್ಲರೂ ಶಾಕ್ ಆದರು. ಈ ವೇಳೆ ತನಿಷಾ ಹೆಸರನ್ನು ಘೋಷಿಸಲಾಯಿತು.

ಬಿಗ್ ಬಾಸ್ ತಮ್ಮ ಹೆಸರು ಘೋಷಿಸುತ್ತಿದ್ದಂತೇ ತನಿಷಾ ಕಣ್ಣೀರು ಹಾಕಿದ್ದಾರೆ. ಇದು ಅವರಿಗೆ ಮಾತ್ರವಲ್ಲ, ಇಡೀ ಮನೆಯವರಿಗೇ ಶಾಕ್ ಆಗಿತ್ತು. ‘ಯಾಕೆ ಬಿಗ್ ಬಾಸ್? ನಾನು ಮನೆಯಿಂದ ಹೊರಹೋಗಬೇಕೆಂದು ನಿಮ್ಮೆಲ್ಲರ ಕೋರಿಕೆಯಾಗಿತ್ತಲ್ಲವೇ? ನೋಡಿ ಹೊರ ಹೋಗುತ್ತಿದ್ದೇನೆ’ ಎಂದು ಕಣ್ಣೀರು ಹಾಕುತ್ತಾ ಮನೆಯಿಂದ ಹೊರಹೋಗುತ್ತಾರೆ. ಈ ಸಂಚಿಕೆ ಇಂದು ಪ್ರಸಾರವಾಗಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈಲಲ್ಲಿ ಬಹಳ ಹಿಂಸೆಯಾಗ್ತಿದೆ, ಇಲ್ಲಿರಲು ಆಗ್ತಿಲ್ಲ: ಅಧಿಕಾರಿಗಳ ಮುಂದೆ ಗೋಗೆರೆದ ದರ್ಶನ್

ರಿಷಬ್ ಶೆಟ್ಟಿ ಹೇಳಿದ್ದಕ್ಕೆ ಕಾಂತಾರ ಚಾಪ್ಟರ್ 1 ಗಾಗಿ ಮೂರು ದಿನ ಬೀಚ್ ನಲ್ಲಿ ಮಲಗಿದ್ದ ಮಲಯಾಳಿ ನಟ

ಕೊನೆ ಕ್ಷಣದಲ್ಲಿ ರಾಜು ತಾಳಿಕೋಟೆ ಕೇಳಿಕೊಂಡಿದ್ದು ಇದೇ ಮಾತು: ಕೇಳಿದ್ರೆ ಕಣ್ಣೀರೇ ಬರುತ್ತೆ

ಕಾಂತಾರ ಚಾಪ್ಟರ್ 1 ರಲ್ಲಿ ರಿಷಬ್ ಶೆಟ್ಟಿ ತಾಯಿ ಪಾತ್ರ ಮಾಡಿದ್ದವರು ಯಾರು ಕೇಳಿದ್ರೆ ಶಾಕ್ ಆಗ್ತೀರಿ

Video: ಪಂಚೆ ಕಟ್ಟೋದು ಹೇಗೆ ಹೇಳ್ಕೊಡು: ರಿಷಬ್ ಶೆಟ್ಟಿಗೆ ಬೇಡಿಕೆಯಿಟ್ಟ ಅಮಿತಾಭ್ ಬಚ್ಚನ್

ಮುಂದಿನ ಸುದ್ದಿ
Show comments