Webdunia - Bharat's app for daily news and videos

Install App

ಸರಿಗಮಪ ಸ್ಪರ್ಧಿಗಳ ಕಷ್ಟಕ್ಕೆ ವೇದಿಕೆಯಲ್ಲೇ ಸಹಾಯ ಘೋಷಿಸಿದ ಅರ್ಜುನ್ ಜನ್ಯಾ

Webdunia
ಸೋಮವಾರ, 10 ಫೆಬ್ರವರಿ 2020 (10:44 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಸರಿಗಮಪ ಹಾಡಿನ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳಾಗಿ ಬಂದಿದ್ದ ಹುಟ್ಟು ಅಂಧರಾದ ಅವಳಿ ಸಹೋದರಿಯರ ಕಷ್ಟಕ್ಕೆ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಮರುಗಿದ್ದಾರೆ.

 
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಅಂಧ ಗಾಯಕರಾದ ರತ್ಮಮ್ಮ ಮತ್ತು ಮಂಜಮ್ಮ ತಮ್ಮ ಊರಿನ ಮಾರಮ್ಮನ ದೇವಾಲಯದ ಮುಂದೆ ಹಾಡಿ ಬಂದ ಹಣದಿಂದ ತಮ್ಮಿಡೀ ಕುಟುಂಬವನ್ನು ಸಾಕಿ ಸಲಹುತ್ತಿದ್ದರು. ಯಾರೋ ಇವರ ಹಾಡಿನ ವಿಡಿಯೋವನ್ನು ಜೀ ವಾಹಿನಿಗೆ ಕಳುಹಿಸಿದ್ದರಿಂದ ಸರಿಗಮಪ ಶೋಗೆ ಇಬ್ಬರೂ ಆಯ್ಕೆಯಾಗಿದ್ದರು.

ಅದರಂತೆ ಇದೀಗ ಅಡಿಷನ್ ನಲ್ಲಿ ಭಾಗವಹಿಸಿ ಇಬ್ಬರೂ ತಮ್ಮ ಜೀವನದ ಕಷ್ಟ ಹೇಳಿಕೊಂಡು ಕಣ್ಣೀರಿಟ್ಟಿದ್ದಾರೆ. ತಮ್ಮಿಡೀ ಕುಟುಂಬವನ್ನು ಈ ಅಂಧ ಸಹೋದರಿಯರು ಹಾಡಿ ಬಂದ ಹಣದಲ್ಲಿ ನೋಡಿಕೊಳ್ಳುತ್ತಿರುವುದಾಗಿ ಹೇಳಿದರು. ಅಷ್ಟೇ ಅಲ್ಲ ಎಷ್ಟೋ ದಿನ ಹಸಿವಿನಿಂದ ಕಂಗೆಟ್ಟಿದ್ದಾಗಿ ಹೇಳಿದರು. ಹಸಿವು ತಾಳಲಾರದೆ ಹಾಡಿ ಹಣ ಸಂಪಾದನೆಗೆ ಈ ಮಾರ್ಗ ಕಂಡುಕೊಂಡಿದ್ದಾಗಿ ಈ ಸಹೋದರಿಯರು ಹೇಳಿದಾಗ ಅಲ್ಲಿದ್ದವರ ಕಣ್ಣಲ್ಲಿ ನೀರು ಬಂದಿತ್ತು.

ಇವರನ್ನು ವಿಶೇಷ ಸ್ಪರ್ಧಿಗಳಾಗಿ ಸ್ಪರ್ಧೆಯಲ್ಲಿ ಉಳಿಸಿಕೊಳ್ಳಲು ತೀರ್ಮಾನಿಸಿದ ತೀರ್ಪುಗಾರರಾದ ನಾದಬ್ರಹ್ಮ ಹಂಸಲೇಖ ಬಳಿಕ ನಿಮ್ಮ ಜೀವನ ಸುಧಾರಿಸಲು ನಮ್ಮಿಂದ ಏನು ಮಾಡಲು ಸಾಧ‍್ಯವೋ ಅದೆಲ್ಲವನ್ನೂ ಮಾಡುತ್ತೇವೆ ಎಂದಿದ್ದಾರೆ. ಅದರಲ್ಲೂ ವಿಶೇಷವಾಗಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಇನ್ಮೇಲೆ ನಿಮ್ಮ ಮನೆಗೆ ತಿಂಗಳ ದಿನಸಿಗೆ ಏನೇನು ಬೇಕಾಗುತ್ತದೋ ಅದೆಲ್ಲವನ್ನೂ ನನ್ನ ಕಡೆಯಿಂದ ನನ್ನ ಕೈಲಾಗುವವರೆಗೂ ತಲುಪಿಸಲು ವ್ಯವಸ್ಥೆ ಮಾಡುತ್ತೇನೆ. ಇನ್ನು ಮುಂದೆ ನೀವು ಹಸಿವಿನಿಂದ ಕೂರುವ ಪ್ರಶ್ನೆಯೇ ಬರದು ಎಂದು ಭರವಸೆ ಕೊಟ್ಟರು. ಅಂತೂ ಇಬ್ಬರನ್ನೂ ಸ್ಪರ್ಧೆಗೆ ಸೇರಿಸಿಕೊಂಡಿರುವುದಕ್ಕೆ ವೀಕ್ಷಕರಿಂದಲೂ ಭಾರೀ ಮೆಚ್ಚುಗೆ ಬಂದಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರಮ್ಯಾ, ದರ್ಶನ್ ಫ್ಯಾನ್ಸ್ ಜಗಳ ತಾರಕಕ್ಕೆ: ರಕ್ಷಿತಾ ಪ್ರೇಮ್ ಕೂಡಾ ಸೇರಿಕೊಂಡ್ರಾ

ಸು ಫ್ರಮ್ ಸೋ ಇಂದೂ ಟಿಕೆಟ್ ಇಂದೂ ಸೋಲ್ಡ್ ಔಟ್

ಅಂದು ಗರುಡಗಮನ, ಇಂದು ಸು ಫ್ರಮ್ ಸೋ: ಸ್ಯಾಂಡಲ್ ವುಡ್ ಗೆ ರಾಜ್ ಬಿ ಶೆಟ್ಟಿ ಸಂಜೀವಿನಿ

ದರ್ಶನ್ ಫ್ಯಾನ್‌ಗೆ ಗುಡ್‌ನ್ಯೂಸ್‌, ದಿ ಡೆವಿಲ್ ಶೂಟಿಂಗ್ ಮುಕ್ತಾಯ

ಸೋ ಲಾಂಗ್ ವ್ಯಾಲಿ ಸಿನಿಮಾದ ಪ್ರೀಮಿಯರ್ ಶೋ ವೇಳೆ ನಿರ್ದೇಶಕನಿಗೆ ನಟಿ ರುಚಿ ಗುಜ್ಜರ್ ಕಪಾಳಮೋಕ್ಷ

ಮುಂದಿನ ಸುದ್ದಿ
Show comments