Select Your Language

Notifications

webdunia
webdunia
webdunia
webdunia

ಸುವರ್ಣದಲ್ಲಿ ಬರ್ತಾಳೆ “ನೀಲಿ”

ಸುವರ್ಣದಲ್ಲಿ ಬರ್ತಾಳೆ “ನೀಲಿ”
ಬೆಂಗಳೂರು , ಮಂಗಳವಾರ, 1 ನವೆಂಬರ್ 2016 (13:50 IST)
ಬೆಂಗಳೂರು: ಸ್ಟಾರ್ ಸುವರ್ಣ ಚಾನೆಲ್ ನಲ್ಲಿ ಮಕ್ಕಳ ದಿನಾಚರಣೆ ದಿನದಿಂದ ಹೊಸ ಧಾರವಾಹಿ ಪ್ರಸಾರವಾಗಲಿದೆ. ಇದೂ ಒಂದು ಪುಟ್ಟ ಮಗುವಿನ ಕತೆ ಎನ್ನುವುದು ವಿಶೇಷ.

ನೀಲಿ ಎಂದು ಈ ಧಾರವಾಹಿಯ ಹೆಸರು. ನವಂಬರ್ 14 ರಿಂದ ಪ್ರತಿದಿನ ರಾತ್ರಿ 8 30 ಕ್ಕೆ ಇದು ಪ್ರಸಾರವಾಗಲಿದೆ. ವಿಶೇಷವೆಂದರೆ ಇದರಲ್ಲಿ ಪ್ರಮುಖ ಪಾತ್ರಧಾರಿಗಳು ಒಂದು ಕಾಲದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಮುಖ ಧಾರವಾಹಿಗಳ ನಾಯಕ ನಾಯಕಿಯರಾಗಿದ್ದವರು.

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರವಾಹಿಯ ನಾಯಕ ನವೀನ್ ಮಹದೇವ್ ಮತ್ತು ಅದೇ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರವಾಹಿಯ ನಾಯಕಿ ಆಶಿತಾ ಚೆಂಗಪ್ಪ ಮುಖ್ಯ ಭೂಮಿಕೆಯಲ್ಲಿದ್ದಾರೆ. ಆಶಿತಾಗೆ ಇಲ್ಲಿ ಮಲತಾಯಿಯ ಪಾತ್ರ.

ನಾಯಕ ಪಾತ್ರಧಾರಿಯ ಮಗಳು ಮತ್ತು ಆಕೆಯ ಪುಟ್ಟ ಬೊಂಬೆ ನೀಲಿ ಹಾಗೂ ಅಪ್ಪ ಮಗಳ ನಡುವಿನ ಬಾಂಧವ್ಯ ಮತ್ತು ಅವರ ನಡುವೆ ಬರುವ ಹೊಸ ಅಮ್ಮನ ನಡುವೆ ನಡೆಯುವ ಕತೆಯಿದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದುನಿಯಾ ಸೂರಿಯ ಸಿಕ್ಸ್ ಪ್ಯಾಕ್