Select Your Language

Notifications

webdunia
webdunia
webdunia
webdunia

ದುನಿಯಾ ಸೂರಿಯ ಸಿಕ್ಸ್ ಪ್ಯಾಕ್

ದುನಿಯಾ ಸೂರಿಯ ಸಿಕ್ಸ್ ಪ್ಯಾಕ್
ಬೆಂಗಳೂರು , ಮಂಗಳವಾರ, 1 ನವೆಂಬರ್ 2016 (10:34 IST)
ಬೆಂಗಳೂರು: ನಿರ್ದೇಶಕ ಸೂರಿ ಹೊಸ ರೀತಿಯಲ್ಲಿ ಸುದ್ದಿಯಾಗಿದ್ದಾರೆ. ಈ ಬಾರಿ ಅವರು ಯಾವುದೋ ಸಿನಿಮಾ ವಿಷಯಕ್ಕೆ ಸುದ್ದಿಯಾಗಿಲ್ಲ. ಬದಲಾಗಿ ಅವರ ಸಿಕ್ಸ್ ಪ್ಯಾಕ್ ನಿಂದಾಗಿ ಸುದ್ದಿಯಾಗಿದ್ದಾರೆ.

ಆರು ತಿಂಗಳ ಕಾಲ ಕಷ್ಟಪಟ್ಟು ದೇಹ ಬೆಳೆಸಿಕೊಂಡು ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದಾರೆ. ಮಾಡಿ ಸುಮ್ಮನಾಗಿಲ್ಲ. ಹಾಗೇ ಸುಮ್ಮನೆ ಒಂದು ಫೋಟೋ ಶೂಟ್ ಕೂಡಾ ಮಾಡಿಕೊಂಡಿದ್ದಾರೆ. ಅರೇ ಇದರ ಹಿಂದೆ ಯಾವುದಾದರೂ ಸಿನಿಮಾ ಮಾಡುವ ಸ್ಕೆಚ್ ಹಾಕಿದ್ದಾರಾ ಅಂತ ಕೇಳಿದರೆ ಇಲ್ಲವೆಂದಿದ್ದಾರೆ.

ಇದೆಲ್ಲಾ ಫಿಟ್ ಆಗಿರಲು ಮಾಡಿಸಿಕೊಂಡಿದ್ದಂತೆ. ಯಾವಾಗಲೂ ಶೂಟಿಂಗ್ ಅಂತ ಮನೆಯಿಂದ ಹೊರಗಿದ್ದು , ಅವರ ಆರೋಗ್ಯ ತೀರಾ ಹಳ್ಳ ಹಿಡಿದಿತ್ತಂತೆ. ಅದಕ್ಕಾಗಿ ಫಿಟ್ ಆಗಿರೋಣ ಅಂತ ಟ್ರೈನರ್ ನ ಸಲಹೆ ಕೇಳಿ ಕಟ್ಟುನಿಟ್ಟಾಗಿ ಆಹಾರ ಸೇವಿಸಿ ಈ ಮಟ್ಟಿಗೆ ದೇಹ ಬೆಳೆಸಿಕೊಂಡಿದ್ದಾರೆ. ಹೇಗೂ ಸಿಕ್ಸ್ ಪ್ಯಾಕ್ ಮಾಡಿಸಿಕೊಂಡಿದ್ದೇನಲ್ಲ ಅಂತ ಫೋಟೋ ತೆಗೆದಿಟ್ಟುಕೊಂಡಿದ್ದಾರೆ. ಬೇರೇನೂ ಇಲ್ವಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾ ರೈಗೆ ಇಂದು ಜನುಮದಿನ