Select Your Language

Notifications

webdunia
webdunia
webdunia
webdunia

ಐಶ್ವರ್ಯಾ ರೈಗೆ ಇಂದು ಜನುಮದಿನ

ಐಶ್ವರ್ಯಾ ರೈಗೆ ಇಂದು ಜನುಮದಿನ
Mumbai , ಮಂಗಳವಾರ, 1 ನವೆಂಬರ್ 2016 (09:52 IST)
ಮುಂಬೈ: ಬಾಲಿವುಡ್ ನಲ್ಲಿ ಚಿರ ಯೌವನದ ನಟಿ ಅಂತ ಕರೆಸಿಕೊಳ್ಳೋ ಮೊದಲನೇ ನಟಿ ರೇಖಾ. ಬಹುಶಃ ಎರಡನೇ ಹೆಸರು ಐಶ್ವರ್ಯಾ ರೈ ಇರಬೇಕು. ವಿಶ್ವ ಸುಂದರಿ ಪಟ್ಟ ಸಿಕ್ಕಿದ ನಂತರ, ಹಲವು ಯಶಸ್ಸುಗಳನ್ನು ಕಂಡ ನಂತರ, ಮದುವೆಯಾಗಿ ಮಗು ಮಡಿಲು ತುಂಬಿದ ಮೇಲೂ ಇನ್ನೂ ಅದೇ ಚಾರ್ಮ್ ಉಳಿಸಿಕೊಂಡಿರುವ ಏಕೈಕ ನಟಿ ಐಶ್.

ಮದುವೆಯಾದ ಮೇಲೂ ಬಾಲಿವುಡ್ ನಲ್ಲಿ ಮೊದಲಿನಂತೇ ಹೀರೋಯಿನ್ ಪಟ್ಟ ಉಳಿಸಿಕೊಳ್ಳುವುದು ಸುಲಭವಲ್ಲ. ಹಾಗೊಂದು ಕಾಲವಿತ್ತು. ನಟಿಯರಿಗೆ ವಿವಾಹವಾಯಿತೆಂದರೆ ಅವರು ಪೋಷಕ ನಟಿಯ ಸ್ಥಾನಕ್ಕೆ ಫಿಟ್ ಎನ್ನಲಾಗುತ್ತಿತ್ತು. ಮದುವೆಯಾದ ನಟಯರು ಹೀರೋಯಿನ್ ಆಗಲು ಲಾಯಕ್ಕಲ್ಲ ಎನ್ನುವ ಕಾಲದಲ್ಲಿ ಅಂತಹ ಗೊಡ್ಡು ನಂಬಿಕೆಗಳನ್ನು ಸುಳ್ಳು ಮಾಡಿ ಧೂಮ್ 2 ನಂತರ ಬೋಲ್ಡ್ ಕ್ಯಾರೆಕ್ಟರ್ ಮಾಡಿದವರು ಐಶ್ವರ್ಯಾ.

ಅಷ್ಟೇ ಏಕೆ ಇತ್ತೀಚೆಗೆ ಬಿಡುಗಡೆಯಾದ ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ಆಕೆಯ ಬೋಲ್ಡ್ ರೊಮ್ಯಾಂಟಿಕ್ ದೃಶ್ಯಗಳನ್ನು ನೋಡಿದವರು ಯಾರೂ ಆಕೆ ಹೆಣ್ಣು ಮಗಳೊಬ್ಬಲ ತಾಯಿ ಎಂದಯ ಹೇಳಲಾರರರು. ತನ್ನ ವೃತ್ತಿ ಜೀವನಕ್ಕೆ ಬಂದರೆ ಐಶ್ ಅಷ್ಟೊಂದು ಖಡಕ್.

ಈಗಲೂ ಆಕೆಗೆ ಅಷ್ಟೇ ಬೇಡಿಕೆಯಿದೆ.  ಐಶ್ ಎಂದರೆ ಸೌಂದರ್ಯದ ಪ್ರತೀಕ. ಆಕೆಯ ಹೆಸರು ಕೇಳಿದರೆ ಈಗಲೂ ರಸಿಕರ ಕಣ್ಣು ಹೊಳೆಯುತ್ತದೆ. ಅಂತಹ  ಬಾಲಿವುಡ್ ನ ಎವರ್ ಗ್ರೀನ್ ಹೀರೋಯಿನ್ ಐಶ್ವರ್ಯಾ ರೈಗೆ ಇಂದು 43 ನೇ ಹುಟ್ಟುಹಬ್ಬ.ಹ್ಯಾಪಿ ಬರ್ತ್ ಡೇ ಐಶ್.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ವಿಡಿಯೋದಲ್ಲಿ ಹೇಳಿದ್ದೇನು?