ಜೊತೆ ಜೊತೆಯಲಿ ಕೊನೇ ದಿನ ತಂಡದೊಂದಿಗೆ ಅನಿರುದ್ಧ್ ಜತ್ಕಾರ್!

Webdunia
ಶನಿವಾರ, 20 ಮೇ 2023 (14:08 IST)
Photo Courtesy: facebook
ಬೆಂಗಳೂರು: ಜೊತೆ ಜೊತೆಯಲಿ ಧಾರವಾಹಿ ಕೊನೆಯ ಎಪಿಸೋಡ್ ನಿನ್ನೆ ರಾತ್ರಿ ಪ್ರಸಾರವಾಗಿದ್ದು, ಧಾರವಾಹಿ ಮುಕ್ತಾಯಗೊಂಡಿದೆ.

ಇದರ ಬೆನ್ನಲ್ಲೇ ಕಲಾವಿದರು, ನಿರ್ದೇಶಕ ಆರೂರು ಜಗದೀಶ್ ಪ್ರೇಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಕಲಾವಿದರು ಕೊನೆಯ ದಿನದ ಚಿತ್ರೀಕರಣದ ಫೋಟೋಗಳನ್ನು ಹಂಚಿಕೊಂಡು ಭಾವುಕರಾಗಿದ್ದಾರೆ.

ವಿಶೇಷವೆಂದರೆ ಧಾರವಾಹಿ ತಂಡದೊಂದಿಗೆ ನಟ ಅನಿರುದ್ಧ್ ಜತ್ಕಾರ್ ಮತ್ತು ಪತ್ನಿ ಕೀರ್ತಿ ವರ್ಧನ್ ಕೂಡಾ ಕಾಣಿಸಿಕೊಂಡಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯಲ್ಲಿ ಆರ್ಯವರ್ಧನ್ ಪಾತ್ರದ ಮೂಲಕ ಮಿಂಚಿದ್ದ ಅನಿರುದ್ಧ್ ಬಳಿಕ ವಿವಾದದಿಂದಾಗಿ ಧಾರವಾಹಿಯಿಂದ ಹೊರನಡೆದಿದ್ದರು. ಅವರ ಸ್ಥಾನಕ್ಕೆ ಹರೀಶ್ ರಾಜ್ ಬಂದಿದ್ದರು.

ಆದರೆ ಅನಿರುದ್ಧ್ ಹೊರನಡೆಯುತ್ತಿದ್ದಂತೇ ಧಾರವಾಹಿಯ ಟಿಆರ್ ಪಿ ಕಡಿಮೆಯಾಗಿತ್ತು. ಹಾಗಿದ್ದರೂ ಇಷ್ಟು ದಿನಗಳ ಕಾಲ ಧಾರವಾಹಿ ಮುಂದುವರಿಸಲಾಗಿತ್ತು. ಈ ಧಾರವಾಹಿಯಲ್ಲಿ ನಾಯಕಿ ಅನು ಸಿರಿಮನೆ ಪಾತ್ರದ ಮನೆಯ ಚಿತ್ರೀಕರಣ ನಡೆಸುತ್ತಿದ್ದ ಬಸವನಗುಡಿಯ ಶೂಟಿಂಗ್ ಮನೆ ಮಾಲಿಕರು ಧಾರವಾಹಿ ತಂಡಕ್ಕೆ ವಿಶೇಷ ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕೆ ಎಲ್ಲಾ ಕಲಾವಿದರ ಜೊತೆ ಅನಿರುದ್ಧ್ ಕೂಡಾ ಆಗಮಿಸಿದ್ದರು. ಕೊನೆಯ ದಿನದ ಫೋಟೋ ಸೆಷನ್ ನಲ್ಲಿ ಅನಿರುದ್ಧ್ ಅವರನ್ನು ನೋಡಿದ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯಲಕ್ಷ್ಮಿ ಟೆಂಪಲ್ ರನ್‌, ಇತ್ತ ಡಿ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್

ಕೊನೆಗೂ ಊಹಾಪೋಹಾಗಳಿಗೆ ಅಂತ್ಯ ಹಾಡಿದ ಸೋನಂ ಕಪೂರ್

ಬಿಗ್‌ಬಾಸ್‌ ಮನೆಯಲ್ಲಿ ಗಿಲ್ಲಿ ಮೇಲೆ ಹಲ್ಲೆ: ಸಹಸ್ಪರ್ಧಿ ರಿಷಾ ವಿರುದ್ಧ ಪೊಲೀಸರಿಗೆ ದೂರು

ಡಿಕೆ ಶಿವಕುಮಾರ್ ಭೇಟಿಯಾದ ರಿಷಬ್ ಶೆಟ್ಟಿ: ರಾಹುಲ್ ಗಾಂಧಿ ಬಗ್ಗೆ ನೋ ಕಾಮೆಂಟ್ಸ್ ಎಂದಿದ್ರು ಎಂದ ನೆಟ್ಟಿಗರು

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮುಂದಿನ ಸುದ್ದಿ
Show comments