ಮದುವೆಯಿದ್ದರೂ ವೋಟ್ ಮಾಡಿ ಗಮನ ಸೆಳೆದ ಗೀತಾ ಧಾರವಾಹಿ ನಾಯಕ ನಟ ಧನುಷ್ ಗೌಡ

Krishnaveni K
ಶನಿವಾರ, 27 ಏಪ್ರಿಲ್ 2024 (08:54 IST)
Photo Courtesy: Instagram
ಬೆಂಗಳೂರು: ನಿನ್ನೆ ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆದಿತ್ತು.  ಕೆಲವು ಕಡೆ ಮತದಾನ ಪ್ರಕ್ರಿಯೆಯಲ್ಲಿ ಕೆಲವು ಅಪರೂಪದ ವಿದ್ಯಮಾನಗಳು ನಡೆದವು.

ಗೀತಾ  ಧಾರವಾಹಿ ಮೂಲಕ ಕಿರುತೆರೆಯಲ್ಲಿ ತಮ್ಮದೇ ಅಭಿಮಾನಿ ವರ್ಗದವರನ್ನು ಹೊಂದಿರುವ ನಟ ಧನುಷ್ ಗೌಡ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ ತಮ್ಮ ಮದುವೆ ದಿನವೂ ಧನುಷ್ ವೋಟ್ ಮಾಡುವುದನ್ನು ಮರೆತಿಲ್ಲ. ಮದುವೆ ದಿನವೂ ವೋಟ್ ಮಾಡಿರುವುದಾಗಿ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಫೋಟೋಪ್ರಕಟಿಸಿದ್ದಾರೆ.

ಇದಕ್ಕೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಎಷ್ಟೋ ಜನ ಉದಾಸೀನ ಪ್ರವೃತ್ತಿ ತೋರಿ ವೋಟ್ ಹಾಕದೇ ವೀಕೆಂಡ್ ರಜೆ ಎಂದು ಫ್ಯಾಮಿಲಿ ಸಮೇತ ಪ್ರವಾಸ ಹೋಗಿದ್ದು ಇದೆ. ಆದರೆ ಧನುಷ್ ತಮ್ಮ ಮದುವೆ ಇದ್ದುಕೊಂಡು ತಪ್ಪದೇ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.

ತಮ್ಮ ಗೆಳತಿ ಸಂಜನಾ ಜೊತೆಗೆ ಧನುಷ್ ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆಗೆ ಅವರ ಸಿನಿ ಸ್ನೇಹಿತರು. ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ. ಮದುವೆ ಫೋಟೋಗಳನ್ನು ಧನುಷ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments