Webdunia - Bharat's app for daily news and videos

Install App

ಕಿರುತೆರೆಗೆ ಮತ್ತೆ ಬಂದ ಕುಲವಧು ಧನ್ಯಾ: ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ಹೊಸ ಟ್ವಿಸ್ಟ್

Krishnaveni K
ಗುರುವಾರ, 11 ಏಪ್ರಿಲ್ 2024 (14:20 IST)
Photo Courtesy: Instagram
ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿ ಭಾಗ್ಯಲಕ್ಷ್ಮಿಯಲ್ಲಿ ಹೊಸ ಟ್ವಿಸ್ಟ್ ಬರುತ್ತಿದೆ. ಇಬ್ಭಾಗವಾಗಿರುವ ಮನೆ ಒಂದು ಮಾಡಲು ಕುಲವಧು ಧಾರವಾಹಿ ಖ್ಯಾತಿಯ ಧನ್ಯಾ ಅಲಿಯಾಸ್ ನಟಿ ದೀಪಿಕಾ ಎಂಟ್ರಿ ಕೊಟ್ಟಿದ್ದಾರೆ.

ಇಂದು ಭಾಗ್ಯಲಕ್ಷ್ಮಿ ಧಾರವಾಹಿಯ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ಈ ಸಂಚಿಕೆಯಲ್ಲಿ ದೀಪಿಕಾ ಕಾಣಿಸಿಕೊಂಡಿದ್ದಾರೆ. ಈ ಧಾರವಾಹಿಯಲ್ಲಿ ಅವರು ರೂಪ ಎಂಬ ಯೂ ಟ್ಯೂಬರ್ ಕಮ್ ಕೌನ್ಸಲರ್ ಪಾತ್ರ ಮಾಡುತ್ತಿದ್ದಾರೆ.

ಸದ್ಯಕ್ಕೆ ಧಾರವಾಹಿಯಲ್ಲಿ ನಾಯಕ ತಾಂಡವ್ ಮತ್ತು ಮನೆಯ ಇತರೆ ಸದಸ್ಯರು ಪ್ರತ್ಯೇಕವಾಗಿದ್ದಾರೆ. ತಾಂಡವ್ ಭಾಗ್ಯಗೆ ಡಿವೋರ್ಸ್ ಕೊಡುತ್ತೇನೆ ಎಂದಿದ್ದಕ್ಕೆ ತಾಯಿ ಕುಸುಮಾ ಮನೆಯನ್ನು ಎರಡು ಭಾಗ ಮಾಡಿದ್ದಾರೆ. ಒಂದು ಭಾಗದಲ್ಲಿ ತಾಂಡವ್ ಏಕಾಂಗಿಯಾಗಿದ್ದರೆ ಇನ್ನೊಂದರಲ್ಲಿ ಭಾಗ್ಯ, ಕುಸುಮ, ಮಾವ ಮಕ್ಕಳು ಇದ್ದಾರೆ.

ಇದೀಗ ಭಾಗ್ಯಗೆ ತಾಂಡವ್ ಮನೆ ಬಿಟ್ಟು ಓಡಿಸುವುದಾಗಿ ಚಾಲೆಂಜ್ ಮಾಡಿದ್ದು, ಅವಳನ್ನು ಮನೆಯಿಂದ ಹೊರಗೆ ಹಾಕಿ ಅಪ್ಪ-ಅಮ್ಮನನ್ನು ಮತ್ತೆ ತನ್ನ ಬಳಿ ಕರೆಸಿಕೊಳ್ಳಲು ರೂಪಳನ್ನು ಕರೆದುಕೊಂಡು ಬರುತ್ತಾನೆ. ಆದರೆ ತಾಂಡವ್ ಏನೋ ತನಗೆ ಬೆಂಬಲ ನೀಡಬೇಕು ಎಂದು ರೂಪಳನ್ನು ಮನೆಗೆ ಕರೆ ತರುತ್ತಾನೆ.

ಆದರೆ ಮನೆಯವರನ್ನು ನೋಡಿದ ಮೇಲೆ ರೂಪ ಯಾರ ಪರ ನಿಲ್ಲುತ್ತಾರೆ, ತಾಂಡವ್ ಬಿಟ್ಟು ಭಾಗ್ಯ ಪಾರ್ಟಿ ಸೇರಿಕೊಳ್ಳುತ್ತಾರಾ ಕಾದು ನೋಡಬೇಕಿದೆ. ಸದ್ಯಕ್ಕೆ ಈ ವಿಶೇಷ ಪಾತ್ರವನ್ನು ದೀಪಿಕಾ ಮಾಡುತ್ತಿದ್ದಾರೆ. ದೀಪಿಕಾ ಈ ಮೊದಲು ಇದೇ ಕಲರ್ಸ್ ಕನ್ನಡ ವಾಹಿನಿಯ ಕುಲವಧು ಧಾರವಾಹಿಯಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments