Webdunia - Bharat's app for daily news and videos

Install App

ಟಿ20 ವಿಶ್ವಕಪ್‌: ಅಮೆರಿಕಕ್ಕೆ ಐತಿಹಾಸಿಕ ಗೆಲುವು, ಪಾಕಿಸ್ತಾನಕ್ಕೆ ಆಘಾತ

sampriya
ಶುಕ್ರವಾರ, 7 ಜೂನ್ 2024 (15:46 IST)
Photo By X
ಅಮೆರಿಕ: ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕ್ರಿಕೆಟ್‌ ಶಿಶು ಆತಿಥೇಯ ಅಮೆರಿಕ ಸೂಪರ್ ಓವರ್‌ನಲ್ಲಿ ಬಲಿಷ್ಠ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ.  

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಾಕಿಸ್ತಾನ ಏಳು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತ್ತು. ನಾಯಕ ಬಾಬರ್ ಆಜಂ 44 ಹಾಗೂ ಶದಾಬ್ ಖಾನ್ 40 ರನ್ ಗಳಿಸಿದರು.

ಗುರಿ ಬೆನ್ನಟ್ಟಿದ ಅಮೆರಿಕ ನಾಯಕ ಮೊನಾಂಕ್ ಪಟೇಲ್ ಅರ್ಧಶತಕದ ಬಲದಿಂದ ಮೂರು ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿತು. ಆ್ಯಂಡ್ರಿಸ್ ಗೌಸ್ (35) ಹಾಗೂ ಆ್ಯರನ್ ಜೋನ್ಸ್ (36*) ಉಪಯುಕ್ತ ಕಾಣಿಕೆ ನೀಡಿದರು. ಅಮೆರಿಕ ತಂಡದಲ್ಲಿರುವ ಚಿಕ್ಕಮಗಳೂರಿನ ನಾಸ್ತುಷ್ ಕೆಂಜಿಗೆ ಮೂರು ವಿಕೆಟ್‌ ಪಡೆದು ಮಿಂಚಿದರು.  

ಕೊನೆಯ ಓವರ್‌ನಲ್ಲಿ ಅಮೆರಿಕದ ಗೆಲುವಿಗೆ 15 ರನ್ ಬೇಕಿತ್ತು. ಆದರೆ 'ಟೈ' ಆಗಿದ್ದರಿಂದ ಪಂದ್ಯ ವಿಜೇತರನ್ನು ಸೂಪರ್ ಓವರ್‌ನಲ್ಲಿ ನಿರ್ಧರಿಸಲಾಯಿತು. ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಮೆರಿಕ ಒಂದು ವಿಕೆಟ್‌ ನಷ್ಟಕ್ಕೆ 18 ರನ್ ಗಳಿಸಿತು. ಇದಕ್ಕುತ್ತರವಾಗಿ ಪಾಕಿಸ್ತಾನ 13 ರನ್‌ ಗಳಿಸಲಷ್ಟೇ ಗಳಿಸಿ ಸೋಲುಪ್ಪಿಕೊಂಡಿತು.

ಪಾಕಿಸ್ತಾನ ವಿರುದ್ಧ ಆಡಿದ ಮೊದಲ ಪಂದ್ಯದಲ್ಲೇ ಗೆಲುವು ದಾಖಲಿಸಿರುವ ಅಮೆರಿಕ ಇತಿಹಾಸ ನಿರ್ಮಿಸಿದೆ. ಮತ್ತೊಂದೆಡೆ ಟಿ20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸದಸ್ಯ ರಾಷ್ಟ್ರದೊಂದಿಗೆ ಪಾಕ್‌ಗೆ ಎದುರಾದ ಮೊದಲ ಸೋಲು ಇದಾಗಿದೆ. ವಿಶ್ವಕಪ್‌ಗೂ ಮುನ್ನ ಬಾಂಗ್ಲಾದೇಶ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಎರಡು ಪಂದ್ಯ ಗೆದ್ದಿದ್ದ ಅಮೆರಿಕ ಸರಣಿ ವಶಪಡಿಸಿಕೊಂಡಿತ್ತು.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments